ಬೆಂಗಳೂರು : ಕಲಾ ಕದಂಬ (ಮೈಸೂರು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಸಂಸ್ಥೆ) ಆಯೋಜಿಸುವ ‘ರಂಗಉದ್ಭೋಧ -3’ ಯಕ್ಷಗಾನ ಒಂದು ನೋಟ – ಉಪನ್ಯಾಸ ಕಾರ್ಯಕ್ರಮವು ದಿನನಕ 23 ಫೆಬ್ರವರಿ 2025ರ ಭಾನುವಾರದಂದು ಸಂಜೆ ಘಂಟೆ 4.00 ರಿಂದ 7.30ರ ವರೆಗೆ ನಡೆಯಲಿದೆ
ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆ 4ನೇ ವಿಭಾಗದ ಉಲ್ಲಾಳ ಉಪನಗರದಲ್ಲಿರುವ ಕಲಾ ಕದಂಬ ಆರ್ಟ್ ಸೆಂಟರ್ (ಕಲಾಗುಡಿ ) ಇಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ ಆನಂದರಾಮ ಉಪಾಧ್ಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಸರ್ಟಿಫಿಕೇಟ್ ಹಾಗೂ ಡಿಪ್ಲೊಮೊ ಪರೀಕ್ಷೆ ಸಿದ್ಧತೆ ಕುರಿತು ಮಾಹಿತಿ ನೀಡಲಾಗುವುದು.
ಸರ್ಟಿಫಿಕೇಟ್, ಡಿಪ್ಲೋಮ ವಿದ್ಯಾರ್ಥಿಗಳಲ್ಲದ ಯಕ್ಷಗಾನ ಆಸಕ್ತರೂ ಈ ಒಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
Subscribe to Updates
Get the latest creative news from FooBar about art, design and business.