ಬಿ.ಸಿ. ರೋಡು : ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ತುಳು ಬದುಕು ವಸ್ತು ಸಂಗ್ರಹಾಲಯ (ರಿ.) ಸಂಚಯಗಿರಿ ಬಿ.ಸಿ. ರೋಡು ಇದರ ವತಿಯಿಂದ ‘ರಾಣಿ ಅಬ್ಬಕ್ಕ ಬಹುಮುಖ ಚಿಂತನೆ ವಿಚಾರಗೋಷ್ಠಿ’ಯನ್ನು ದಿನಾಂಕ 18 ಏಪ್ರಿಲ್ 2025ರಂದು ಬೆಳಗ್ಗೆ 9-30 ಗಂಟೆಗೆ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಇತಿಹಾಸ ಸಂಶೋಧಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರು ವಹಿಸಲಿದ್ದು, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರು ಉದ್ಘಾಟನೆ ಮಾಡಲಿರುವರು. ಬೆಳಗ್ಗೆ 11-30 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ಗೋಷ್ಠಿ 01ರಲ್ಲಿ ‘ಉಳ್ಳಾಲದ ಅಬ್ಬಕ್ಕ ರಾಣಿಯರು ಐತಿಹಾಸಿಕ ನೆಲೆ’ ಎಂಬ ವಿಷಯದ ಬಗ್ಗೆ ‘ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮಾಲತಿ ಕೃಷ್ಣಮೂರ್ತಿ, ಗೋಷ್ಠಿ 02ರಲ್ಲಿ ‘ಕಾದಂಬರಿಗಳಲ್ಲಿ ರಾಣಿ ಅಬ್ಬಕ್ಕ’ ಎಂಬ ವಿಷಯದ ಬಗ್ಗೆ ವಿಶ್ರಾಂತ ಉಪನ್ಯಾಸಕರಾದ ಡಾ. ವಿ.ಕೆ. ಯಾದವ, ಗೋಷ್ಠಿ 03ರಲ್ಲಿ ‘ರಂಗಭೂಮಿಯಲ್ಲಿ ರಾಣಿ ಅಬ್ಬಕ್ಕ’ ಎಂಬ ವಿಷಯದ ಬಗ್ಗೆ ನಿರತನಿರಂತ ಮಕ್ಕಳ ಶಾಲೆಯ ಐ.ಕೆ. ಬೊಳುವಾರು, ಗೋಷ್ಠಿ 04ರಲ್ಲಿ ‘ಜನಮಾನಸದಲ್ಲಿ ರಾಣಿ ಅಬ್ಬಕ್ಕ’ ಎಂಬ ವಿಷಯದ ಬಗ್ಗೆ ವಿಶ್ರಾಂತ ಪ್ರಾಂಶುಪಾಲರಾದ ಡಾ. ಆಶಾಲತಾ ಸುವರ್ಣ ಇವರುಗಳು ವಿಷಯ ಮಂಡನೆ ಮಾಡಲಿದ್ದು ಹಾಗೂ ‘ರಾಣಿ ಅಬ್ಬಕ್ಕ ಬಹುಮುಖ ನೋಟ’ ಎಂಬ ವಿಷಯದ ಬಗ್ಗೆ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಇವರು ಸಂವಾದ ನಡೆಸಿಕೊಡಲಿದ್ದಾರೆ.