ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇವರ ಆಶ್ರಯದಲ್ಲಿ ಶ್ರೀ ಅಣ್ಣು ದಡ್ಡಲ್ ಕಾಡ್ ಇವರು ಬರೆದ “ರಾವ್ ಸಾಹೇಬ್ ಕುದ್ಮುಲ್ ರಂಗರಾವ್” ಎಂಬ ಕೃತಿಯನ್ನು ಬಲ್ಲಾಳ್ ಬಾಗ್ ನಲ್ಲಿರುವ ಪತ್ತುಮುಡಿ ಸೌಧದಲ್ಲಿ ಲೋಕಾರ್ಪಣೆ ಮಾಡಲಾಯಿತು.ಜೀವ ವಿಮಾ ನಿಗಮದ ನಿವೃತ್ತ ವಲಯ ಮಹಾಪ್ರಬಂಧಕ ಶ್ರೀ ಬಿ. ಚಂದ್ರಕಾಂತ ಕುಮಾರ್ ಇವರ ಅಧ್ಯಕ್ಷೆತೆಯಲ್ಲಿ ನಡೆದ ಈ ಕಾರ್ಯ್ರಮದಲ್ಲಿ ಲೇಖಕರು ಮತ್ತು ನಿವೃತ್ತ ಆರ್ ಟಿ ಒ ಆದ ಡಾ. ಮುಗಳವಳ್ಳಿ ಕೇಶವ ಧರಣಿಯವರು ಕೃತಿಯನ್ನು ಅನಾವರಣಗೊಳಿಸಿ, ಮಾತನಾಡುತ್ತಾ ಸಾಮಾಜಿಕ ಅಸಮಾನತೆ ಇದ್ದ ಆ ಕಾಲದಲ್ಲಿ ಕುದ್ಮಲ್ ರಾವ್ ಅವರು ಸಮುದಾಯಕ್ಕೆ ಮಾಡಿದ ತ್ಯಾಗ ಸೇವೆ , ಅವರಿಗಿದ್ದ ಕಾಳಜಿ ನೆನೆದು ಗದ್ ಗದ್ಗದಿತರಾದರು. ಸರಕಾರಿ ಪ. ಪೂ.ಕಾಲೇಜು ಕಾರ್ನಾಡು, ಮುಲ್ಕಿಯ ಪ್ರಾಂಶುಪಾಲರಾದ ಡಾ.ವಾಸುದೇವ ಬೆಳ್ಳೆಯವರು ಕುದ್ಮಲ್ ರಂಗರಾವ್ ಅವರನ್ನು ಸ್ಮರಿಸಿಕೊಳ್ಳುತ್ತ , ತಮ್ಮ ಇಳಿವಯಸ್ಸಿನಲ್ಲಿ ಕೃತಿ ರಚನೆ ಮಾಡಿದ ಶ್ರೀ ಅಣ್ಣು ದಡ್ಡಲ್ ಇವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಕಲಾ ನಂದಾವರ ಇವರು ಕುದ್ಮಲ್ ರಂಗ ರಾವ್ ಅವರ ಕಾರ್ಯ ವೈಖರಿ ಯನ್ನು ಹಾಗೂ ಹೃದಯ ವೈಶಾಲ್ಯತೆಯನ್ನು ಸ್ಮರಿಸಿದರು. ಶ್ಯಾಮ ರಾವ್ ವಿಠ್ಠಲ್ ಕೊ – ಆಪರೇಟಿವ್ ಮಂಗಳೂರು ಇವರು ಕೊರಗ ಮತ್ತು ಸಮಗಾರ ಸಮುದಾಯದ ಉನ್ನತಿಗೆ ಕುದ್ಮಲ್ ರಂಗ ರಾವ್ ಪಟ್ಟ ಶ್ರಮದ ಬಗ್ಗೆ ಅಭಿಮಾನ ವ್ಯಕ್ತಡಿಸಿದರು. ವಕೀಲರಾದ ಶ್ರೀ ಬಿ. ಆರ್. ಸದಾಶಿವರು ಈ ಸಂದರ್ಭದಲ್ಲಿ ರಂಗರಾವ್ ಅವರ ಮಕ್ಕಳು ಮರಿಮಕ್ಕಳೊಂದಿಗೆ ಈಗಲೂ ಇರುವ ಸಂಬಂಧವನ್ನು ಅಭಿಮಾನದಿಂದ ಹೇಳಿಕೊಂಡರು. ಕಲ್ಲೂರು ನಾಗೇಶ್ ಆಕೃತಿ ಪ್ರಿಂಟರ್ಸ್ ಸ್ವಾಗತಿಸಿ, ಶ್ರಿಮತಿ ಚಂದ್ರಕಲಾ ನಂದಾವರ ವಂದಿಸಿದರು.