Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾರಿ ಚಿನ್ನಾರಿಯ ಹನ್ನೊಂದನೆಯ ಸರಣಿ ಕಾರ್ಯಕ್ರಮ ‘ರಸ ಪಯಸ್ವಿನಿ’ ಯಶಸ್ವಿಯಾಗಿ ಸಂಪನ್ನ
    Cultural

    ನಾರಿ ಚಿನ್ನಾರಿಯ ಹನ್ನೊಂದನೆಯ ಸರಣಿ ಕಾರ್ಯಕ್ರಮ ‘ರಸ ಪಯಸ್ವಿನಿ’ ಯಶಸ್ವಿಯಾಗಿ ಸಂಪನ್ನ

    November 22, 20232 Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ರಂಗ ಚಿನ್ನಾರಿಯ ಅಂಗ ಸಂಸ್ಥೆಯಾದ ನಾರಿ ಚಿನ್ನಾರಿಯ ಹನ್ನೊಂದನೆಯ ಸರಣಿ ಕಾರ್ಯಕ್ರಮವು ದಿನಾಂಕ 19-11-2023ರಂದು ಚತುರ್ಭಾಷೆಗಳ ನಾರಿಯರ ಸಮ್ಮಿಲನದ ‘ರಸ ಪಯಸ್ವಿನಿ’ ಪದ್ಮಗಿರಿ ಕಲಾಕುಟೀರ ಕರಂದಕ್ಕಾಡಿನಲ್ಲಿ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ಸಂಪನ್ನಗೊಂಡಿತು.

    ಪ್ರಪ್ರಥಮವಾಗಿ ಕಾಸರಗೋಡಿನ ನಾಲ್ಕು ಭಾಷೆಗಳ ಮಹಿಳೆಯರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಲೆತು ಸಂಭ್ರಮಿಸಿದರು. ಈ ವಿಶಿಷ್ಟ ಕಾರ್ಯಕ್ರಮವನ್ನು ಹಿರಿಯ ಲೇಖಕಿ, ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ (ಕನ್ನಡ), ಸಂಶೋಧಕಿ, ಸಾಹಿತಿ, ಕುಶಾಲಾಕ್ಷಿ ಕುಲಾಲ್ (ತುಳು), ಗಾಯಕಿ, ಗೃಹಿಣಿ ಮಾಯಾ ಮುಕುಂದ ರಾಜ್ (ಕೊಂಕಣಿ), ಸಮಾಜ ಸೇವಕಿ, ಮಾನವ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷೆ ಜುಲೇಖಾ ಮಾಹಿನ್ (ಮಲಯಾಳ) ಜತೆಗೂಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಡಾ. ಪ್ರಮೀಳಾ ಮಾಧವ್ “ನಾಲ್ಕು ಭಾಷೆಗಳ ಅಕ್ಕತಂಗಿಯರೆಲ್ಲ ಸೇರಿ ಸಂತೋಷಗೊಳ್ಳುವ ಸಂದಭ೯ವನ್ನು ಮೊದಲ ಬಾರಿಗೆ ಸೃಷ್ಟಿಸಿದ ನಾರಿಚಿನ್ನಾರಿಯ ಹೆಜ್ಜೆಯನ್ನು ಶ್ಲಾಘಿಸಿದರು. ಹೆಣ್ಣು ಮಕ್ಕಳ ಕುರಿತಾಗಿ ಇರುವ ಅನೇಕ ಪೂವಾ೯ಗ್ರಹಗಳು ಕಡಿಮೆಯಾಗಿವೆ. ಆದ್ದರಿಂದ ಇಂದಿನ ನಾರಿ ಭಾಗ್ಯವಂತಳು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ವಿವೇಕದಿಂದ ಹೆಜ್ಜೆಯಿಡುವ ಹೊಣೆಗಾರಿಕೆ ಅವಳ ಮೇಲಿದೆ” ಎಂದು ಕಿವಿ ಮಾತು ಹೇಳಿದರು.

    ಈ ಸಂದರ್ಭದಲ್ಲಿ ಸಮಾಜ ಸೇವಕಿ ಪ್ರಭಾವತಿ ಟೀಚರ್, ನಾಟಿ ವೈದ್ಯೆ ಶ್ಯಾಮಲಾ ರೈ ಬೆಳ್ಳೂರು, ಮಲಯಾಳಂ ಲೇಖಕಿ ಆಲಿಸ್ ಟೀಚರ್ ಹಾಗೂ ಕೊಂಕಣಿ ರಂಗನಟಿ ಮತ್ತು ನಿರ್ದೇಶಕಿ ಮಾಲತಿ ಮಾಧವ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ನಾರಿ ಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ಫಲಪುಷ್ಪ ಹಾರ, ಸ್ಮರಣಿಕೆಗಳನ್ನಿತ್ತು ಅವರನ್ನು ಗೌರವಿಸಿದರು. ಇದೊಂದು ವಿಶಿಷ್ಟ ಅನುಭವವೆಂದು ಸನ್ಮಾನಿತರು ಕೃತಜ್ಞತೆಯನ್ನು ವ್ಯಕ್ತ ಪಡಿಸಿದರು.

    ಬಳಿಕ ಕನ್ನಡ ಭಾಷೆಯಲ್ಲಿ ಭಾವಗೀತೆ : ಅನನ್ಯಾ ಪಿ,ಮೀಯಪದವು,
    ದಾಸರ ಪದ ನೃತ್ಯ ಪ್ರಸ್ತುತಿ : ನಾಟ್ಯ ವಿದ್ಯಾಲಯ ಕುಂಬಳೆ – ಇದರ ವಿದ್ಯಾರ್ಥಿನಿಯರಿಂದ,
    ಜನಪದಗೀತೆ (ಲಾವಣಿ) : ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು, ನವ್ಯಶ್ರೀ ಎನ್.ಎಸ್., ಶರಣ್ಯ ಕೆ.ಜೆ., ಕಾವ್ಯ ಎನ್.ಕೆ., ಅನುಶ್ರೀ ಎಂ., ನೇಹ ಪಿ., ಜ್ಯೋತಿಕಾ ಎಂ., ಕಾವ್ಯ ಎಸ್.,
    ಕಾವ್ಯಾಲಾಪನೆ : ಜ್ಯೋತಿಕಾ ಮಾನ್ಯ, ಹರಿಕಥೆ :ನಿಶ್ವಿತಾ ಅಡೂರು, ಯಕ್ಷಗಾನದ ಹಾಡುಗಳು : ಅದ್ವೈತ ಪೆಲತ್ತಡ್ಕ
    ಕಥನ ಕಾವ್ಯ ರಂಗ ರೂಪಕ : ರಂಗಡಿಂಡಿಮ, ಪೆರ್ಲ ತಂಡದ ಮಕ್ಕಳಿಂದ ಉದಯ ಸಾರಂಗ ನಿರ್ದೇಶನದಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈವರ ‘ಪಂಜರದ ಗಿಳಿ’ ಕಥನ ಕಾವ್ಯ ರಂಗ ರೂಪಕ ನಡೆಯಿತು. ಈ ರಂಗ ರೂಪಕಕ್ಕೆ ಗಾಯನ : ಮಮತ ನಲ್ಕ, ಪ್ರಸಾಧನ : ಭಾರತಿ ಶೆಟ್ಟಿ ನಾಟೆಕ್ಕಲ್ ಮತ್ತು ವಸ್ತ್ರಾಲಂಕಾರ : ಶುಭಶ್ರೀ, ನಯನ ನಲ್ಕ, ಜಯಶ್ರೀ ಮಾಡಿದ್ದು, ರಂಗ ಡಿಂಡಿಮದ ಅಧ್ಯಕ್ಷರಾದ ಶ್ರೀ ರಾಜೇಶ್ ಬಜಕೂಡ್ಲು ನೇತೃತ್ವ ವಹಿಸಿರುತ್ತಾರೆ. ರಂಗ ಡಿಂಡಿಮ ಬಾಲ ಕಲಾವಿದರು : ಶಾಸ್ತಾ ಶ್ರೀರಾಮ್, ಸಾನ್ವಿ ಬಿ., ಶ್ರೀಹರಿ, ಹರಿಪ್ರಿಯಾ ಬಿ., ತನ್ಮಯ್ ಆರ್.ಕೆ., ಕುಶಿ ಬದಿಯಡ್ಕ, ಪುನೀತ್ ಸಾರಂಗ, ನಂದನ್ ನಾಯಕ್ ನಾಲ್ಕ, ಸಮನ್ವಿ ಬಾಜಕೂಡ್ಲು

    ಮಲಯಾಳಂ ಭಾಷೆಯಲ್ಲಿ ಜಾನಪದ ಗೀತೆ – ನವ್ಯಾ ಉಮೇಶ್, ಅಂಬಿಕಾ, ಸ್ನೇಹಾ, ಆತಿರ, ಹರ್ಷಿತಾ, ಅನನ್ಯಾ
    ಸಮೂಹ ನೃತ್ಯ – ವರ್ಷ, ರಕ್ಷಾ, ಶ್ರೀನಂದ, ನಿಕಿತಾ, ಮಾಪಿಲ ಪಾಟ್ಟ್ – ಫಾತಿಮಾ
    ಜಾನಪದ ನೃತ್ಯ – ಜೂನ ಮರಿಯಂ, ಏಕ ಪಾತ್ರಾಭಿನಯ – ಹರಿತಾ ಎಸ್ಪಿನೋವ,
    ಒಪ್ಪನಾ – ರಂಜು, ಗ್ರೀಷ್ಮಾ, ಶ್ರೀಶ, ಗೀತಾ, ಜಾಸ್ಮಿನ್, ಅನಿತಾ, ಸ್ವಾತಿ,
    ಮಲಯಾಳಂ ಜಾನಪದ ಹಾಡು – ಹರ್ಷಿತಾ ಮನ್ನಿಪ್ಪಾಡಿ, ವಯಲಿನ್ ವಾದನ – ಜಯಲಕ್ಷ್ಮಿ ಪಿ.,

    ತುಳು ಭಾಷೆಯಲ್ಲಿ ಕಾವ್ಯ ವಾಚನ (ತುಳು ಭಾಗವತ) : ಜ್ಯೋತಿಕಾ.ಎಂ ,
    ಸಮೂಹ ಗಾಯನ : ಕಾವ್ಯ ಎನ್.ಕೆ, ನವ್ಯಶ್ರೀ ಎನ್.ಎಸ್, ಶರಣ್ಯ ಕೆ.ಜೆ., ಕಾವ್ಯ ಎಸ್., ಅನ್ನಪೂರ್ಣಾ, ಹರ್ಷಿತಾ ಬಿ., ಅರ್ಪಿತಾ ಪಿ.ಎಸ್., ಇಶಾ ಸಿ., ದಿವ್ಯಶ್ರೀ ಕೆ.
    ಸಮೂಹ ನೃತ್ಯ : ಚಿತ್ರ ಕೆ., ದೀಕ್ಷ ಕೆ., ರಶ್ಮಿ ಟಿ., ಆಶಾಲತಾ ಬಿ., ವರ್ಷಶ್ರೀ ಆರ್., ರೇಷ್ಮಾ ಯಂ.
    ಸಮೂಹ ಗಾಯನ : ಜ್ಯೋತಿಕಾ ಎಂ., ನೇಹ ಪಿ., ಅನುಶ್ರೀ ಯಂ., ಅಶಾಲತ ಬಿ., ಪಲ್ಲವಿ, ಅಕ್ಷತಾ ಪಿ., ಮಾನಸ ಎಸ್.ಕೆ., ನಿರೀಕ್ಷ, ಶರಣ್ಯ ಎಸ್.,
    ಸಮೂಹ ನೃತ್ಯ : ಪೂಜಾ ಕೆ., ಪ್ರಮೀಳಾ ಕೆ., ಕಾವ್ಯ ಎಸ್., ಇಶಾ ಸಿ., ದಿವ್ಯಶ್ರೀ ಕೆ., ಪುಷ್ಪಾಂಜಲಿ, ನಂದಿತಾ

    ಕೊಂಕಣಿ ಗೀತೆಗಳು – ಮೇಧಾ ಬಿ.ಕಾಮತ್ ಮತ್ತು ಪ್ರಹಸನ – ರಮ್ಯ ರಾವ್ ಎಂ.
    ಹೀಗೆ ನಾಲ್ಕು ಭಾಷೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

    ಕನ್ನಡ, ತುಳು, ಮಲಯಾಳ ಭಾಷೆಗಳಲ್ಲಿ ನಾರಿ ಚಿನ್ನಾರಿಯ ಕಾರ್ಯದರ್ಶಿ ದಿವ್ಯಾಗಟ್ಟಿ ಪರಕ್ಕಿಲ, ಡಾ.ಆಶಾಲತಾ, ಶರಣ್ಯಾನಾರಾಯಣನ್ ಹಾಗೂ ಸರ್ವಮಂಗಳಾಜಯ್ ಪುಣ್ಚಿತ್ತಾಯ ಕಾಯ೯ಕ್ರಮವನ್ನು ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ರಂಗಚಿನ್ನಾರಿ ನಿರ್ದೇಶಕರು ಕಾಸರಗೋಡು ಚಿನ್ನಾ, ಕವಿ ಸುಂದರಬಾರಡ್ಕ, ಅಡ್ವಕೇಟ್ ಅಕ್ಷತಾ ಬದಿಯಡ್ಕ, ಡಾ. ಪ್ರಮೀಳಾ ಮಾಧವ್, ಜುಲೇಖಾ ಮಾಹಿನ್, ಸರಕಾರಿ ಕಾಲೇಜಿನ ಪ್ರಾಧ್ಯಾಪಿಕೆ ಲಕ್ಷ್ಮಿ ಕೆ., ರಂಗನಟಿ ಮಾಲತಿ ಮಾಧವ್ ಕಾಮತ್, ಹರ್ಷಿತಾ ಎಂಬಿವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆಯೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮಕ್ಕೆ ಸರ್ವಮಂಗಳಾಜಯ್ ಪುಣ್ಚಿತ್ತಾಯ ವಂದನಾರ್ಪಣೆಗೈದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಕಲಾ ಉತ್ಸವ ಕೊಡಗು-2023’
    Next Article ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆ – ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ
    roovari

    2 Comments

    1. ನಾ.ದಾಮೋದರ ಶೆಟ್ಟಿ on November 22, 2023 11:46 am

      ರಂಗಚಿನ್ನಾರಿಯ ಅಂಗಸಂಸ್ಥೆಯಾದ ನಾರಿಚಿನ್ನಾರಿಯ ಅಪರೂಪದ ಆಲೋಚನೆಗಳು ಹೊಸ ಪರಿಕಲ್ಪನೆಗಳೊಂದಿಗೆ ಮುನ್ನುಗ್ಗುತ್ತಿವೆ. ಶುಭಾಶಯಗಳು.

      Reply
    2. ನಾ.ದಾಮೋದರ ಶೆಟ್ಟಿ on November 22, 2023 11:49 am

      ನಾರಿ ಚಿನ್ನಾರಿಯೇ ಒಂದು ವಿನೂತನ ಆಲೋಚನೆಯಿಂದ ಕೂಡಿದ ಸಂಸ್ಥೆ. ಅವರ ಕಾರ್ಯಕ್ರಮ ಸಾಮರಸ್ಯದ ಪರಿಕಲ್ಪನೆಯಿಂದ ಕೂಡಿರುವುದುಇನ್ನೂ ಪ್ರಶಂಸನೀಯ.
      ಅಭಿನಂದನೆಗಳು.

      Reply

    Add Comment Cancel Reply


    Related Posts

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವ

    May 14, 2025

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025

    ಮಣಿಪಾಲದಲ್ಲಿ ‘ಕಲಾಮಯಂ’ ಸಾಂಸ್ಕೃತಿಕ ಸಂಘಟನೆ ಉದ್ಘಾಟನೆ

    May 6, 2025

    2 Comments

    1. ನಾ.ದಾಮೋದರ ಶೆಟ್ಟಿ on November 22, 2023 11:46 am

      ರಂಗಚಿನ್ನಾರಿಯ ಅಂಗಸಂಸ್ಥೆಯಾದ ನಾರಿಚಿನ್ನಾರಿಯ ಅಪರೂಪದ ಆಲೋಚನೆಗಳು ಹೊಸ ಪರಿಕಲ್ಪನೆಗಳೊಂದಿಗೆ ಮುನ್ನುಗ್ಗುತ್ತಿವೆ. ಶುಭಾಶಯಗಳು.

      Reply
    2. ನಾ.ದಾಮೋದರ ಶೆಟ್ಟಿ on November 22, 2023 11:49 am

      ನಾರಿ ಚಿನ್ನಾರಿಯೇ ಒಂದು ವಿನೂತನ ಆಲೋಚನೆಯಿಂದ ಕೂಡಿದ ಸಂಸ್ಥೆ. ಅವರ ಕಾರ್ಯಕ್ರಮ ಸಾಮರಸ್ಯದ ಪರಿಕಲ್ಪನೆಯಿಂದ ಕೂಡಿರುವುದುಇನ್ನೂ ಪ್ರಶಂಸನೀಯ.
      ಅಭಿನಂದನೆಗಳು.

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.