ಸಾಗರ : ನಾಟ್ಯ ತರಂಗ ಟ್ರಸ್ಟ್ (ರಿ.) ಸಾಗರ, ಇದರ ವತಿಯಿಂದ ‘ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ 2023’ವು ದಿನಾಂಕ 09-12-2023ರಿಂದ 15-12-2023ರವರೆಗೆ ಪ್ರತೀ ದಿನ ಸಂಜೆ 5.30ಕ್ಕೆ ಸಾಗರ ಶ್ರೀನಗರದ ನೃತ್ಯ ಭಾಸ್ಕರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಸಾಂಸ್ಕೃತಿಕ ಸಾರಥಿ ಪ್ರಶಸ್ತಿ’ ಪ್ರದಾನ ಹಾಗೂ ನಾಟ್ಯ ತರಂಗ ನೃತ್ಯಾಭ್ಯಾಸಿಗಳಿಂದ ‘ನೃತ್ಯಾಂಕುರ’ ಪ್ರದರ್ಶನವಿದೆ.
ದಿನಾಂಕ 09-12-2023ರಂದು ಸಾಗರ ಹೊಸನಗರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಇವರಿಂದ ಉದ್ಘಾಟನೆಗೊಳ್ಳಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ನಗರ ಸಭೆ ಸದಸ್ಯರಾದ ಶ್ರೀ ಗಣೇಶ್ ಪ್ರಸಾದ್ ವಹಿಸಲಿರುವರು. ಸಂಜೆ 6ರಿಂದ ಮುಂಬೈಯ ವೈಭವ ಆರೇಕರ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 10-12-2023ರಂದು ಅಂತರಾಷ್ಟ್ರೀಯ ನೃತ್ಯ ಕಲಾವಿದರು, ಪದ್ಮಾಭೂಷಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಪದ್ಮಾ ಸುಬ್ರಮಣ್ಯಂ ಚೆನ್ನೈ ಇವರ ಘನ ಉಪಸಿತ್ಥಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಿವ ಮೊಗ್ಗದ ವಿದ್ವಾನ್ ನಾರಾಯಣ ಭಟ್ ಮತ್ತು ಚೆನ್ನೈಯ ಡಾ. ಗಾಯತ್ರಿ ಕಣ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ‘ಭರತ ನೃತ್ಯ’ವು ಬೆಂಗಳೂರಿನ ನಾಟ್ಯತರಂಗ ಮತ್ತು ಚೆನ್ನೈಯ ಮಹತಿ ಕಣ್ಣನ್ ಇವರಿಂದ ಪ್ರಸ್ತುತಗೊಳ್ಳಲಿದೆ.
ದಿನಾಂಕ 11-12-2023ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಗರ ಕ.ಸಾ.ಪ.ದ ಅಧ್ಯಕ್ಷರಾದ ಶ್ರೀ ವಿ.ಟಿ. ಸ್ವಾಮಿ ಮತ್ತು ವಸ್ತ್ರ ವಿನ್ಯಾಸದ ನಿರ್ದೇಶಕರಾದ ಶ್ರೀ ರುದ್ರಪ್ಪ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ನಂತರ ಬೆಂಗಳೂರಿನ ನಟುವಾಂಗ ಕಲಾಪ್ರತಿಷ್ಠಾನದ ವಿದ್ವಾನ್ ಡಿ.ವಿ. ಪ್ರಸನ್ನ ಕುಮಾರ್ ಇವರ ಮಾರ್ಗದರ್ಶನದಲ್ಲಿ ‘ನಾದ ಸೌಖ್ಯ’ ಅವಧಾನ ಕಲಾಕ್ಕೆ ಮೃದಂಗದಲ್ಲಿ ಶ್ರೀ ವಿನಯ್ ನಾಗರಾಜನ್ ಮತ್ತು ವಯೋಲಿನ್ ನಲ್ಲಿ ಶ್ರೀ ಕೇಶವ ಮೋಹನಕುಮಾರ್ ಸಾಥ್ ನೀಡಲಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಬಾನ್ಸುರಿ ವಾದನದಲ್ಲಿ ಶ್ರೀ ಸಮೀರ್ ರಾವ್ ಬಾನ್ಸುರಿ, ಶ್ರೀ ಆದರ್ಶ್ ಶೆಣೈ ತಬಲಾ ಮತ್ತು ಶ್ರೀ ಪರ್ಜನ್ಯ ಭಟ್ ಬಾನ್ಸುರಿ ಸಹವಾದನ ನುಡಿಸಲಿದ್ದಾರೆ.
ದಿನಾಂಕ 12-12-2023ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಪರಶುರಾಮ್ ಈ., ಶ್ರೀ ಗಣಪತಿ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಿ. ದೇವೇಂದ್ರ ಭೋಜಪ್ಪ ಮತ್ತು ಕಾಕಲ್ ಸಮೂಹದ ಮಾಲೀಕರಾದ ಶ್ರೀ ಗಣೇಶ್ ಕಾಕಲ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಕೆ. ಮುರಳಿ ಮೋಹನ್, ನಂದಿನಿ ಮೇಹ್ತಾ ಮತ್ತು ಬೆಂಗಳೂರಿನ ನಾದಂ ತಂಡದವರಿಂದ ‘ಕಥಕ್’ ಮತ್ತು ಬೆಂಗಳೂರಿನ ವಿನಯಾ ನಾರಾಯಣನ್, ಲಕ್ಷ್ಮೀ ಗಿರೀಶ್ ಮತ್ತು ಜೆನ್ನಾ ಫ್ರಾನ್ಸಿಸ್ ಇವರಿಂದ ‘ಮೋಹಿನಿಯಾಟ್ಟಂ’ ಪ್ರದರ್ಶನಗೊಳ್ಳಲಿದೆ.
ದಿನಾಂಕ 13-12-2023ರಂದು ಸಾಗರ ನಾಟ್ಯತರಂಗ ಮತ್ತು ಯಕ್ಷಶ್ರೀ ಇವರ ಸಂಯುಕ್ತ ಸಂಯೋಜನೆಯಲ್ಲಿ ‘ಯಕ್ಷ ಭರತ’ ಕಾರ್ಯಕ್ರಮವು ವಿದ್ವಾನ್ ಜನಾರ್ದನ್ ಪರಿಕಲ್ಪನೆ, ಡಾ. ಹೆಚ್. ಎಸ್. ಮೋಹನ್ ಸಂಯೋಜನೆ ಮತ್ತು ಡಾ. ಜಿ. ಎಸ್. ಭಟ್ ಮಾರ್ಗ ದರ್ಶನದಲ್ಲಿ ‘ಕಾನನ ಕಥಾ’ – ರಾಮಾಯಣದ ಆಯ್ದ ಕಥಾ ಭಾಗ (ಚಿತ್ರಕೂಟ, ಶೂರ್ಪನಖಾ, ಮಾಯಾಮೃಗ, ಸೀತಾಪಹರಣ, ಜಟಾಯುಮೋಕ್ಷ) ಪ್ರಸ್ತುತಿ ನಡೆಯಲಿದೆ.
ದಿನಾಂಕ 14-12-2023ರಂದು ಶ್ರೀ ಸುಗಂಧಿ ಅಗರಬತ್ತಿ ಇದರ ಮಾಲೀಕರಾದ ಶ್ರೀ ರವೀಂದ್ರ ಭಟ್ ಮತ್ತು ಶ್ರೀ ನಗರ ಯುವ ಜನ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲೈಮಾಮಣಿ ಶ್ರೀಮಹಾದೇವಪೆದ್ದಿ ಮೂರ್ತಿ ಶಿಷ್ಯೆ ಚೆನ್ನೈಯ ಕು. ರೇಷ್ಮಾ ಜಿ. ಇವರಿಂದ ಕೂಚಿಪುಡಿ ಮತ್ತು ಶ್ರೀ ವಿಜಯ ಕುಮಾರ್ ಎಸ್. ಇವರ ಶಿಷ್ಯರಾದ ವಿ. ಪೂಜಾ ಸುಗಮ್ ಮತ್ತು ವಿ. ಸಮೀಕ್ಷಾ ಕೆ.ಎಂ. ಇವರಿಂದ ‘ಯುಗಳ ಭರತನಾಟ್ಯ’ ಪ್ರಸ್ತುತಿ ನಡೆಯಲಿದೆ.
ದಿನಾಂಕ 15-12-2023ರಂದು ಸಾಮಾಜಿಕ ಕಾರ್ಯಕರ್ತರಾದ ಐ.ವಿ. ಹೆಗಡೆ ಇವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಗರದ ನಾಟ್ಯ ತರಂಗದವರಿಂದ ಭರತನಾಟ್ಯದಲ್ಲಿ ‘ಜಯಚಾಮರಾಜೇಂದ್ರ ನಮನ’ ಮತ್ತು ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದಿಂದ ಆಯ್ದ ಕಗ್ಗಗಳ ಗಾಯನ, ವ್ಯಾಖ್ಯಾನ ಮತ್ತು ನೃತ್ಯ ಪ್ರಸ್ತುತಿ ಶ್ರೀಮತಿ ಸ್ನೇಹ ಕಿರಣ್ ಮತ್ತು ಶ್ರೀ ಸೂರ್ಯಕಿರಣ್ ಜೋಯ್ಸ್ ತಂಡದಿಂದ ‘ಕಗ್ಗ ರಸಾರ್ಣವ’ ಪ್ರಸ್ತುತಗೊಳ್ಳಲಿದೆ.