ಮೈಸೂರು : ಜಿ.ಪಿ.ಐ.ಇ.ಆರ್. ರಂಗ ತಂಡದ ವತಿಯಿಂದ ಮೂರು ದಶಕಗಳ ಯಶಸ್ವಿ ರಂಗ ಪಯಣದ ಸಲುವಾಗಿ ‘ರಾಷ್ಟ್ರೀಯ ರಂಗೋತ್ಸವ’ ನಾಟಕಗಳು, ಸಂಗೀತ, ವಿಚಾರ ಸಂಕಿರಣ, ಜಾನಪದ, ಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನಗಳು ದಿನಾಂಕ 27-03-2024ರಿಂದ 31-03-2024ರವರೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಡೆಯಲಿದೆ.
ದಿನಾಂಕ 27-03-2024ರಂದು ಸಂಜೆ ಗಂಟೆ 6-00ಕ್ಕೆ ಈ ರಂಗೋತ್ಸವವು ಉದ್ಘಾಟನೆಗೊಳ್ಳಲಿದ್ದು, ಗಂಟೆ 7-00ರಿಂದ ಕೇರಳದ ‘ಜ್ವಾಲ ಕುರುವಾಕೋಡ್’ ತಂಡ ಪ್ರಸ್ತುತಪಡಿಸುವ ಈ.ವಿ. ಹರಿದಾಸ್ ರಂಗರೂಪ ಮತ್ತು ನಿರ್ದೇಶನದ ‘ಬಾವಲ್’ ಮಲಯಾಳಂ ನಾಟಕ ಪ್ರದರ್ಶನ, ದಿನಾಂಕ 28-03-2024ರಂದು ಸಂಜೆ ಗಂಟೆ 5-30ಕ್ಕೆ ದೇವಾನಂದ ವರಪ್ರಸಾದ್ ಮತ್ತು ತಂಡದವರಿಂದ ‘ಅರಿವು ತೋರಿದ ಗುರು’ ತತ್ವಪದ ಗಾಯನ ಮತ್ತು ಗಂಟೆ 7-00ರಿಂದ ಡಾ. ಹೆಚ್.ಎಸ್. ಶಿವಪ್ರಕಾಶ್ ರಚಿಸಿರುವ ರಂಗಾಯಣದ ಮೈಮ್ ರಮೇಶ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ‘ಜಿ.ಪಿ.ಐ.ಇ.ಆರ್. ರಂಗ ತಂಡ’ದ ಯಶಸ್ವಿ 25ನೇ ಬೆಳ್ಳಿ ಪ್ರದರ್ಶನವಾದ “ಮಂಟೇಸ್ವಾಮಿ ಕಥಾ ಪ್ರಸಂಗ’ ಕನ್ನಡ ಜಾನಪದ ನಾಟಕ ಪ್ರದರ್ಶನ, ದಿನಾಂಕ 29-03-2024ರಂದು ಸಂಜೆ ಗಂಟೆ 5-30ಕ್ಕೆ ಡಾ. ಮೈಸೂರು ಗುರುರಾಜ್ ಮತ್ತು ತಂಡದವರಿಂದ ‘ತಂಬೂರಿ ಜಾನಪದ ಗಾಯನ’ ಮತ್ತು ಗಂಟೆ 7-00ರಿಂದ ಪ್ರದೀಪ್ ಚಂದ್ರ ಕುತ್ತಾಡಿ ನಿರ್ದೇಶನದಲ್ಲಿ ಉಡುಪಿ ಹಿರಿಯಡಕದ ಅಮೋಘ (ರಿ.) ತಂಡ ಅಭಿನಯಿಸುವ ‘ರೈಲು ಭೂತ’ ತುಳು ನಾಟಕ ಪ್ರದರ್ಶನ, ದಿನಾಂಕ 30-03-2024ರಂದು ಸಂಜೆ ಗಂಟೆ 5-30ಕ್ಕೆ ‘ವಾಸು ದೀಕ್ಷಿತ್ ಕಲೆಕ್ಟಿವ್’ ಇವರಿಂದ ‘ಸಂಗೀತ ಸಂಜೆ’ ಮತ್ತು ಗಂಟೆ 7-00ರಿಂದ ಶ್ರೀನಿವಾಸ್ ಬೀಶೆಟ್ಟಿ ನಿರ್ದೇಶನದಲ್ಲಿ ‘ಕಹೆ ವಿದುಶಕ್ ಫೌಂಡೇಶನ್’ ತಂಡದವರಿಂದ ‘ಸಕಲ್ ಜಾನಿ ಹೇ ನಾಥ್’ ಹಿಂದಿ ನಾಟಕ ಪ್ರದರ್ಶನ, ದಿನಾಂಕ 31-03-2024ರಂದು ಸಂಜೆ ಗಂಟೆ 5-30ಕ್ಕೆ ಮಂಗಳೂರಿನ ‘ಸಿಂಗಾರಿ ಮೇಳಂ’ನಿಂದ ‘ತತ್ವಮಸಿ’ ಮತ್ತು ಗಂಟೆ 7-00ರಿಂದ ಬೆಂಗಳೂರಿನ ‘ರಂಗಪಯಣ ತಂಡ’ದವರಿಂದ ರಾಜ್ ಗುರು ಹೊಸಕೋಟೆ ರಚಿಸಿ ನಿರ್ದೇಶಿಸಿದ ‘ನವರಾತ್ರಿಯ ಕೊನೆಯ ದಿನ’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.