ಕಾರ್ಕಳ : ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಹಾಗೂ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ‘ರಾಷ್ಟ್ರೀಯ ಚಿಂತನೆ –ಕನಕ ವೈಚಾರಿಕತೆಯ ಸೊಬಗು’ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 16-03-2024ರಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಆಡಿಯೋ ವಿಶುವಲ್ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 9.30ಕ್ಕೆ ಈ ವಿಚಾರ ಸಂಕಿರಣವನ್ನು ಮಾಹೆ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಉದ್ಘಾಟನೆ ಮಾಡಲಿರುವರು. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿ.ಎ. ಶಿವಾನಂದ ಪೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉಡುಪಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಇವರು ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ.
ಗಂಟೆ 10-45ರಿಂದ ನಡೆಯುವ ಚಿಂತನೆ 1ರಲ್ಲಿ ‘ಕನಕ ಕೀರ್ತನೆ – ದೇಸೀ ಚಿಂತನೆಯ ವೈಶಿಷ್ಟ್ಯ’, ಚಿಂತನೆ 2ರಲ್ಲಿ ‘ಕನಕ ಕಾವ್ಯ – ಸಮಕಾಲೀನ ಸಂವಾದ’ ಮತ್ತು ಚಿಂತನೆ 3ರಲ್ಲಿ ‘ಕನಕದಾಸರು ಮತ್ತು ಇತರ ದಾಸ ಪರಂಪರೆ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು, ಸಂಜೆ ಗಂಟೆ 3.15ಕ್ಕೆ ಶಿವಮೊಗ್ಗದ ಚಿಂತಕರಾದ ಶ್ರೀ ಸತ್ಯನಾರಾಯಣ ಎಂ.ಆರ್. ಇವರು ‘ಜನಪದ ಚಿಂತನೆಯಲ್ಲಿ ಕನಕದಾಸರು’ ಎಂಬ ವಿಷಯದ ಬಗ್ಗೆ ಸಮಾರೋಪ ನುಡಿಗಳನ್ನಾಡಲಿದ್ದಾರೆ.