ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇದರ ವತಿಯಿಂದ ದಿನಾಂಕ 23 ನವೆಂಬರ್ 2024ರಂದು ‘ಓದು-ಸಂವಾದ’ ಕಾರ್ಯಕ್ರಮ ಮತ್ತು ದಿನಾಂಕ 24 ನವೆಂಬರ್ 2024 ರಂದು ಕೃತಿ ಬಿಡುಗಡೆ ಸಮಾರಂಭವು ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ಸಾಹಿತ್ಯ ಸದನದಲ್ಲಿ ನಡೆಯಲಿದೆ.
ದಿನಾಂಕ 23 ನವೆಂಬರ್ 2024ರಂದು ಅಪರಾಹ್ನ 2-30 ಗಂಟೆಗೆ ನಡೆಯಲಿರುವ ‘ಓದು-ಸಂವಾದ’ ಕಾರ್ಯಕ್ರಮದಲ್ಲಿ ಲೇಖಕಿ ಉಷಾ ಪಿ. ರೈಯವರ ‘ಒಲ್ಲೆನೆನ್ನದಿರು ನಮ್ಮದಲ್ಲದ ನಾಳೆಗಳ’ (ಆತ್ಮಕಥನ ಭಾಗ -2) ಸಂವಾದ ನಡೆಯಲಿದೆ. ಶ್ರೀಮತಿ ವನಜಾಕ್ಷಿ ಉಳ್ಳಾಲ ಇವರು ಆಶಯ ಗೀತೆ ಹಾಗೂ ಶ್ರೀಮತಿ ಕಾತ್ಯಾಯಿನಿ ಭಿಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಕ.ಲೇ.ವಾ. ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ.
ದಿನಾಂಕ 24 ನವೆಂಬರ್ 2024ರಂದು ಅಪರಾಹ್ನ 3-00 ಗಂಟೆಗೆ ನಡೆಯಲಿರುವ ಕೃತಿ ಬಿಡುಗಡೆ ಸಮಾರಂಭದಲ್ಲಿ ಚಂದ್ರಕಲಾ ನಂದಾವರ ಇವರ ‘ಸಾಹಿತ್ಯ ಕವಳ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಶ್ರೀಮತಿ ಆಕೃತಿ ಭಟ್ ಇವರು ಆಶಯ ಗೀತೆ ಹಾಗೂ ಶ್ರೀಮತಿ ಅರುಣಾ ನಾಗರಾಜ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಕ.ಲೇ.ವಾ. ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶೈಲಾ ಯು. ಇವರು ಕೃತಿ ಬಿಡುಗಡೆ ಹಾಗೂ ಪರಿಚಯ ನೀಡಲಿದ್ದಾರೆ.