ಬೆಂಗಳೂರು : ಕುವೆಂಪು ಕರ್ನಾಟಕ ಜನಪರ ವೇದಿಕೆ (ನೋಂ) ಇದರ ವತಿಯಿಂದ ದಿನಾಂಕ 28 ಡಿಸೆಂಬರ್ 2024ರ ಶನಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಶ್ರೀ ಸಂದೇಶ್ ಕುಂಬಾರ್ ಇವರ ಸಾರಥ್ಯದಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಈ ಸಮ್ಮೇಳನದಲ್ಲಿ ವಿಚಾರ ಸಂಕೀರಣ, ಮುಖ್ಯ ಅತಿಥಿಗಳ ಹಿತನುಡಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾರಂಭದ ಕವಿಗೋಷ್ಠಿಯಲ್ಲಿ ತಾವು ಭಾಗವಹಿಸಲು ಇಚ್ಛಿಸಿದಲ್ಲಿ ಡಾ. ಸುನೀಲ್ ಕುಮಾರ್, ಇವರ ದೂರವಾಣಿ 9740369046 ಗೆ ತಮ್ಮ ಹೆಸರು, ಊರು, ದೂರವಾಣಿ ಸಂಖ್ಯೆಯನ್ನು ನಮೂದಿಸಿ ವಾಟ್ಸ ಅಪ್ ಮಾಡಿ ನೋಂದಾಯಿಸಲು ಸೂಚಿಸಲಾಗಿದೆ.