ಮಡಿಕೇರಿ : ಚೆಂಬು ಸಾಹಿತ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ 7ನೇ ವರ್ಷದ ಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶವು ಪ್ರಕಟಗೊಂಡಿದ್ದು, ಸ್ಪರ್ಧೆಗೆ ಬಂದಂತಹ 35 ಕವಿತೆಗಳಲ್ಲಿ 3 ಕವಿತೆಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಸ್ಪರ್ಧೆಗೆ ಬಂದಂತಹ ಉಳಿದೆಲ್ಲಾ ಕವಿತೆಗಳನ್ನು ಬರೆದವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು ಎಂದು ಸ್ಪರ್ಧೆಯ ಆಯೋಜಕರು ತಿಳಿಸಿದ್ದಾರೆ. ಕವಿತೆಗಳ ಮೌಲ್ಯಮಾಪಕರಾಗಿ ಕವಯಿತ್ರಿ ಶ್ರೀಮತಿ ಸ್ಮಿತಾ ಅಮೃತರಾಜ್ ಉಪಸ್ಥಿತರಿದ್ದರು. ಬಹುಮಾನಗಳ ಪ್ರಾಯೋಜಕರಾಗಿ ಬಾರಿಯಂಡ ಜೋಯಪ್ಪ ಹಾಗೂ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ತಲಾ 1 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ.
ಪ್ರಥಮ ಬಹುಮಾನ ಜೀವನ್ ಪುರ ಇವರು ಬರೆದಂತಹ “ಬೊದ್ದು ಬಾಳಲಿನಂಗೆ” ಕವಿತೆಗೆ, ದ್ವಿತೀಯ ಬಹುಮಾನ ವಿಮಲಾರುಣ ಪಡ್ಡಂಬೈಲು ಇವರು ಬರೆದಂತಹ “ಆಟಿ” ಕವಿತೆಗೆ ಹಾಗೂ ತೃತೀಯ ಬಹುಮಾನ ಬಿಟ್ಟರ ಚೋಂದಮ್ಮ ಬೆಂಗಳೂರು ಇವರು ಬರೆದಂತಹ “ನೆಂದೇ ಬಾತ್” ಕವಿತೆಗೆ ಲಬಿಸಿದೆ.
Subscribe to Updates
Get the latest creative news from FooBar about art, design and business.
Previous Articleಆಚಾರ್ಯ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ಹಾಸನ ಜಿಲ್ಲಾಮಟ್ಟದ ಕವಿಗೋಷ್ಠಿ
Next Article ಮಂಗಳೂರಿನಲ್ಲಿ ಬೃಹತ್ ಜನಾಗ್ರಹ ಸಭೆ