ಮಂಗಳೂರು : ತಬ್ಲಾ ಸೋಲೋ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆ ಹಾಗೂ ರಾಗ, ತಾಳಗಳ ಕುರಿತು ಮಾಹಿತಿ ನೀಡುವ ರಿಮ್ಜಿಮ್ ಬೈಠಕ್ ನ್ನು ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನವು ದಿನಾಂಕ 24 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಆಯೋಜಿಸಿದೆ.
ಈ ಕಾರ್ಯಕ್ರಮದ ಪೂರ್ವಾರ್ಧದಲ್ಲಿ ತಲ್ಲಾ ಸೋಲೋ ಕಾರ್ಯಕ್ರಮವನ್ನು ಧಾರವಾಡದ ಯುವ ಕಲಾವಿದ ಹೇಮಂತ್ ಜೋಶಿ ನಡೆಸಿಕೊಡಲಿದ್ದಾರೆ. ಉತ್ತರಾರ್ಧದಲ್ಲಿ ಬೆಂಗಳೂರಿನ ಯುವ ಗಾಯಕ ಅನಿರುದ್ಧ ಐತಾಳ್ ಹಾಡಲಿದ್ದಾರೆ. ಹಾರ್ಮೋನಿಯಂನಲ್ಲಿ ಗೋವಾದ ದತ್ತರಾಜ್ ಮಾಲ್ಶಿ ಸಹಕರಿಸಲಿದ್ದಾರೆ. ಪ್ರಸ್ತುತಪಡಿಸುವ ರಾಗಗಳ ಕುರಿತು ಸಂಪೂರ್ಣ ಮಾಹಿಸಿ, ರಾಗದ ಶ್ರೀಮಂತಿಕೆ, ಏರಿಳಿತ ಹಾಗೂ ಶೈಲಿಗಳ ಕುರಿತು ಮಾಹಿತಿಯನ್ನು ಯುವ ಗಾಯಕ ಅನಿರುದ್ಧ ಐತಾಳ್ ನೀಡಲಿದ್ದಾರೆ. ಬಳಿಕ ಸಂಗೀತಾಸಕ್ತರ ಪ್ರಶ್ನೆಗಳಿದ್ದಲ್ಲಿ ಸಂಗೀತಗಾರರು ಉತ್ತರಿಸಲಿದ್ದಾರೆ.
ಬೆಂಗಳೂರಿನ ಖ್ಯಾತ ಉದ್ಯಮಿ ಡಾ. ಪಿ. ದಯಾನಂದ ಪೈ ಇವರ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಂಗೀತಾಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.