ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ ಇಲ್ಲಿನ ಯಕ್ಷಗಾನ ಸಂಘದ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ ದಿನಾಂಕ 30-09-2023ನೇ ಶನಿವಾರ ಸಂಜೆ 4-00 ರಿಂದ ನಡೆಯಲಿದೆ.
ಸುರತ್ಕಲ್ಲಿನ ವಾಸುದೇವ ರಾವ್ ಇವರ ಸಂಯೋಜನೆಯಲ್ಲಿ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಸದಸ್ಯರು ‘ರುಕ್ಮಿಣಿ ಕಲ್ಯಾಣ’ ಪ್ರಸಂಗವನ್ನು ಪ್ರಸ್ತುತಪಡಿಸಲಿರುವರು. ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಶ್ರೀಮತಿಯರಾದ ಸುಲೋಚನಾ ವಿ.ರಾವ್, ಸುಮಿತ್ರ ಶಶಿಕಾಂತ ಕಲ್ಲೂರಾಯ ಹಾಗೂ ಸುಮತಿ ಭಟ್ ಕೆ.ಯನ್ ಭಾಗವಹಿಸಲಿರುವರು.

