ಬೆಂಗಳೂರು : ಬೇವಿನಹಳ್ಳಿಯ ‘ಜಿಗುರು’ ತಂಡದ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 9ನೇ ಮಾರ್ಚ್ 2025ರಂದು ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ‘ರುಮುರುಮುರುಮು’ ಪೂರ್ವಿಕರ ನಾದ ‘ಜಂಗಮ ಕಲೆಕ್ಟಿವ್’ ತಂಡ ತನ್ನ ಮೊದಲ ಪ್ರದರ್ಶನ ನೀಡುತ್ತಿದೆ.
ಶಿರಾ ಸೀಮೆಯ ‘ಬೇವಿನಹಳ್ಳಿ’ಯ ಅಪ್ರತಿಮ ಅರೆ ಮತ್ತು ನಾದಸ್ವರದ ಕಲಾವಿದರು ತಮ್ಮ ಕಲೆ ಮತ್ತು ಬದುಕಿನ ಅನುಭವಗಳನ್ನು ಬೆಸದುಕೊಂಡು ಕಟ್ಟಿರುವ ವಿಶೇಷ ಪ್ರಯೋಗ. ಹೊಸ ತಲೆಮಾರಿನ ಅನನ್ಯ ನಟಿ, ಬರಹಗಾರ್ತಿ, ಸಿನಿಮಾ ನಿರ್ದೇಶಕಿ ‘ ಶ್ರದ್ದಾ ರಾಜ್’ ಇವರು ತಿಂಗಳ ಕಾಲ ಬೇವಿನಹಳ್ಳಿಯಲ್ಲಿ ಇದ್ದು ವಿಭಿನ್ನ ಪ್ರಕ್ರಿಯೆಯಲ್ಲಿ ಈ ನಾಟಕವನ್ನು ಕಟ್ಟಿದ್ದಾರೆ.
ತಳ ಸಮುದಾಯಗಳ ಕಲೆ ಮತ್ತು ಕಲಾವಿದರ ಜೊತೆಗಿನ ಒಡನಾಟವನ್ನು ಒಂದು ಸಾಂಸ್ಕೃತಿಕ ಚಳುವಳಿಯೆಂದು ಭಾವಿಸಿ ಜಂಗಮ ತಂಡ ಹಿಂದೆ ‘ಕೇರಿ ಹಾಡು’ ಪ್ರಯೋಗವನ್ನು ಮಾಡಿತ್ತು. ಚಂದ್ರಶೇಕರ್ ಇವರು ದಿಂಡಗೂರಿನ ‘ಸಾವಿತ್ರಿ ಬಾಫುಲೆ ಮಹಿಳಾ ಸ್ವಸಹಾಯ ತಂಡ’ಕ್ಕೆ ಅದನ್ನು ನಿರ್ದೇಶಿಸಿದ್ದರು. ಪ್ರಸ್ತುತ ಅರೆಯ ನಾದ ಮತ್ತು ಬದುಕಿನ ‘ರುಮುರುಮುರುಮು’ ಜಂಗಮ ಭಾವಿಸುವ ಸಾಂಸ್ಕೃತಿಕ ಚಳುವಳಿಯ ಮುಂದುವರಿಕೆ.