Subscribe to Updates

    Get the latest creative news from FooBar about art, design and business.

    What's Hot

    ಐವರು ಸಾಹಿತಿಗಳಿಗೆ ಬ್ಯಾರಿವಾರ್ತೆ ಗೌರವ ಪ್ರಶಸ್ತಿ

    February 27, 2026

    ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ‘ನಾಟ್ಯಾಂಜಲಿ ಉತ್ಸವ’

    February 27, 2026

    ಸವಿತಾ ಮಾಧವ ಶಾಸ್ತ್ರಿ ಮಹಿಳಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ

    February 27, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮರಾಠಿ ಲೇಖಕಿ ಉಮಾ ಕುಲಕರ್ಣಿಗೆ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’
    Awards

    ಮರಾಠಿ ಲೇಖಕಿ ಉಮಾ ಕುಲಕರ್ಣಿಗೆ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’

    January 21, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 19 ಜನವರಿ 2025ರ ಭಾನುವಾರದಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಮರಾಠಿ ಅನುವಾದಕಿ ಹಾಗೂ ಲೇಖಕಿಯಾದ ಉಮಾ ಕುಲಕರ್ಣಿ ಮಾತನಾಡಿ “ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಬರಹದ ಶೈಲಿ ಭಿನ್ನವಾಗಿದೆ. ಇದರಿಂದಾಗಿಯೇ ಅವರಿಗೆ ಮರಾಠಿಯಲ್ಲಿ ದೊಡ್ಡ ಓದುಗರ ವಲಯವಿದೆಯೇ ಹೊರತು, ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಪ್ರಬಲವಾಗಿರುವುದು ಕಾರಣವಲ್ಲ. ಮಹಾರಾಷ್ಟ್ರದಲ್ಲಿ ಆರೆಸ್ಸೆಸ್‌ ಪ್ರಬಲವಾಗಿರುವುದರಿಂದ ಅಲ್ಲಿ ಭೈರಪ್ಪ ಅವರ ಕೃತಿಗಳಿಗೆ ಹೆಚ್ಚು ಬೇಡಿಕೆಯಿದೆಯೆಂದು ಕನ್ನಡದ ಕೆಲ ಸಾಹಿತಿಗಳು ಅಭಿಪ್ರಾಯಪಟ್ಟಿದ್ದರು. ಆದರೆ ವಾಸ್ತವ ಬೇರೆಯಾಗಿದ್ದು, ಓದುಗ ಬಳಗ ಹೆಚ್ಚಲು ಅವರ ಶೈಲಿಯೇ ಮುಖ್ಯ ಕಾರಣ. ಪುಣೆಗೆ ಅವರು ಬರುತ್ತಾರೆಂದು ತಿಳಿದರೆ ದೊಡ್ಡ ಸಂಖ್ಯೆಯಲ್ಲಿ ಜನರು ಅವರನ್ನು ನೋಡಲು ಕಾದು ಕುಳಿತಿರುತ್ತಾರೆ” ಎಂದರು.
    ಲೇಖಕಿ ಸಹನಾ ವಿಜಯಕುಮಾರ್ ಮಾತನಾಡಿ “ಭೈರಪ್ಪ ಅವರನ್ನು ಮರಾಠಿ ಓದುಗರಿಗೆ ತಲುಪಿಸಿದ ಶ್ರೇಯಸ್ಸು ಉಮಾ ಕುಲಕರ್ಣಿ ಅವರಿಗೆ ಸಲ್ಲುತ್ತದೆ. ಕನ್ನಡದ ನಂತರ ಮರಾಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಭೈರಪ್ಪ ಹೊಂದಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ತಮ್ಮ ಕೃತಿಯನ್ನು ಮರಾಠಿ ಓದುಗರಿಗೆ ತಲುಪಿಸಿದಕ್ಕಾಗಿ ಧನ್ಯವಾದ ತಿಳಿಸಿದರು. ಲೇಖಕಿಯರಾದ ಅಂಜಲಿ ಜೋಶಿ, ಉಮಾ ರಾಮರಾವ್, ಭೈರಪ್ಪ ಅವರ ಪತ್ನಿ ಸರಸ್ವತಿ, ಪ್ರತಿಷ್ಠಾನದ ಟ್ರಸ್ಟಿ ಉದಯಶಂಕ‌ರ್, ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ಜಿ. ಎಲ್. ಶೇಖರ್ ಹಾಗೂ ಸಾಹಿತ್ಯ ಭಂಡಾರದ ರಾಜ ಉಪಸ್ಥಿತರಿದ್ದರು. ಈ ಪ್ರಶಸ್ತಿಯು ರೂಪಾಯಿ 1 ಲಕ್ಷ ನಗದು ಒಳಗೊಂಡಿದೆ.

    award Literature marathi
    Share. Facebook Twitter Pinterest LinkedIn Tumblr WhatsApp Email
    Previous Articleಕೊಡಗಿನ ಕವಿ ಸಾಹಿತಿ ಕಲಾವಿದರ ಪರಿಚಯ ಮಾಲಿಕೆ 62 : ಕೃಪಾ ದೇವರಾಜ್
    Next Article ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ದಿ. ನಾ. ಡಿಸೋಜರವರ ಶ್ರದ್ಧಾಂಜಲಿ ಸಭೆ
    roovari

    Add Comment Cancel Reply


    Related Posts

    ಐವರು ಸಾಹಿತಿಗಳಿಗೆ ಬ್ಯಾರಿವಾರ್ತೆ ಗೌರವ ಪ್ರಶಸ್ತಿ

    February 27, 2026

    ಸವಿತಾ ಮಾಧವ ಶಾಸ್ತ್ರಿ ಮಹಿಳಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ

    February 27, 2026

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.