ಮಡಿಕೇರಿ : ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಪದ್ಮ ಭೂಷಣ ಎಸ್.ಎಲ್. ಭೈರಪ್ಪ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದ ಘಟಕದ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಎಸ್.ಎಲ್. ಭೈರಪ್ಪರವರ ಸಾಹಿತ್ಯ ಸಾಧನೆಯನ್ನು ಕೊಂಡಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕ. ಸಾ. ಪ. ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಮಾತನಾಡಿ “ಕನ್ನಡ ಸಾಹಿತ್ಯ ಲೋಕಕ್ಕೆ ಎನ್. ಎಲ್. ಭೈರಪ್ಪರವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಭೈರಪ್ಪರವರ ಸಾಹಿತ್ಯ ಜೀವನದ ದಾರಿ ಯುವ ಸಾಹಿತಿಗಳಿಗೆ ಮಾದರಿಯಾಗಿದ್ದು, ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿದೆ” ಎಂದು ಹೇಳಿದರು.

ಹಿರಿಯ ಸಾಹಿತಿ ಕಿಗಾಲು ಎಸ್. ಗಿರೀಶ್ ಇವರು ಎಸ್. ಎಲ್. ಭೈರಪ್ಪರವರ ಸಾಧನೆ ಹಾಗೂ ಜೀವನ ಚರಿತ್ರೆಯನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವರಿಸಿದರು. ಮೂರ್ನಾಡು ಹೋಬಳಿ ಘಟಕದ ಸ್ಥಾಪಕಾಧ್ಯಕ್ಷರಾದ ಡಾ. ಮೇಚಿರ ಸುಭಾಷ್ ನಾಣಯ್ಯ, ಪದಾಧಿಕಾರಿಗಳಾದ ವಿಘ್ನೇಶ್ ಮೂರ್ನಾಡು, ವಿ.ಎಂ. ಧನಂಜಯ, ಪುದಿಯೊಕ್ಕರ ರಮೇಶ್, ಮಹಾಬಲೇಶ್ವರ ಭಟ್, ಮಹಿಳಾ ಪ್ರತಿನಿಧಿ ಮೀನಾಕ್ಷಿ ಕೇಶವ, ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ, ಸಂಘಟನಾ ಕಾರ್ಯದರ್ಶಿಗಳಾದ ಕೊಂಪುಳಿದ ಮಮತ, ಅಬ್ದುಲ್ ಖಾದರ್, ಕೋಶಾಧಿಕಾರಿ ಮಡೆಯಂಡ ಸೂರಜ್, ಕಾರ್ಯದರ್ಶಿ ಅಪ್ಪಚಂದ ಸುಚಿತ ಕಾವೇರಪ್ಪ, ಕವಯತ್ರಿ ರಮ್ಯ ಕೆ. ಜಿ., ಮಡಿಕೇರಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಖಂಡರಾದ ಎಚ್. ಕೆ. ಉಮಾವತಿ, ಮರಗೋಡು ಗಣಪತಿ ಭಜನಾ ಮಂಡಳಿಯ ಪ್ರೇಮ ಗಣೇಶ್, ಸಿ.ಜೆ. ತಾರಾದೇವಿ, ಭಾನುಪ್ರಿಯ, ಮೂರ್ನಾಡು ಸಂಜೀವಿನಿ ಒಕ್ಕೂಟದ ರಮ್ಯಾ ಎಂ.ಡಿ., ಭಾರತಿ ಬಿ.ಎಲ್., ಮೂರ್ನಾಡು ಟೈಲರ್ ಸಂಘದ ಸದಸ್ಯರುಗಳಾದ ರೋಸ್ಲಿ ಬಿ.ಡಿ., ಅಜರುದ್ದೀನ್ ವಿ.ಯು., ಬಿ.ಪಿ. ಶಾಂತಿ ಮತ್ತಿತರರು ಹಾಜರಿದ್ದು ಎಸ್.ಎಲ್. ಭೈರಪ್ಪರವರಿಗೆ ಗೌರವ ಸಲ್ಲಿಸಿದರು.


