ಮಂಗಳೂರು : ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ಸುರತ್ಕಲ್ ಇವರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಚೇಳಾಯ್ರು ಇದರ ಸಹಯೋಗದಲ್ಲಿ ಆಯೋಜಿಸುವ ಎಸ್. ಆರ್. ಹೆಗ್ಡೆ ನೆಂಪು ಮತ್ತು ಎಸ್. ಆರ್. ಹೆಗ್ಡೆ -ವ್ಯಕ್ತಿ ಚಿತ್ರ ಹಾಗೂ ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಕೃತಿಗಳ ಅವಲೋಕನ, ಓದು-ಬರಹ-ಬಹುಮಾನ ವಿತರಣಾ ಸಮಾರಂಭವು 30 ಆಗಸ್ಟ್ 2024ರಂದು ಚೇಳಾಯ್ರು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.
ಸರಕಾರಿ ಪದವಿಪೂರ್ವ ಕಾಲೇಜು ಚೇಳಾಯ್ರು ಇಲ್ಲಿನ ಪ್ರಾಂಶುಪಾಲರಾದ ಡಾ. ಜ್ಯೋತಿ ಚೇಳಾಯ್ರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಂ. ಆರ್. ಪಿ. ಎಲ್. ಇದರ ವಿಶ್ರಾಂತ ಅಧಿಕಾರಿಯಾದ ಶ್ರೀಮತಿ ವೀಣಾ ಟಿ. ಶೆಟ್ಟಿ ಇವರು ಎಸ್. ಆರ್. ಹೆಗ್ಡೆ ನೆಂಪು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಮತಿ ಉದಯ ಪ್ರಭಾ ಶೆಟ್ಟಿ ಚೇಳಾಯ್ರು ಗುತ್ತು ವಿಜೇತರಿಗೆ ಬಹುಮಾನ ವಿತರಿಸಲಿರುವರು.

