ಮಂಗಳೂರು : ಮಂಗಳೂರಿನ ಶ್ರೀನಿವಾಸ್ ಯುನಿವರ್ಸಿಟಿಯಿಂದ ಶ್ರೀ ಶ್ಯಾಮರಾವ್ ಸ್ಮರಣೆಯಲ್ಲಿ ನೀಡಲಾಗುತ್ತಿರುವ ‘ಸಾಧನಶ್ರೀ -2025’ ಪ್ರಶಸ್ತಿಗೆ ಮಂಗಳೂರಿನ ನೃತ್ಯ ಭಾರತಿ ಕದ್ರಿ ಇದರ ನಿರ್ದೇಶಕಿಯಾದ ಗೀತಾ ಸರಳಾಯ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಫೆಬ್ರವರಿ 2025ರಂದು ನಡೆಯಲಿದೆ.
ನೃತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ತನ್ನ 9ನೇ ವಯಸ್ಸಿಗೆ ಪಾದಾರ್ಪಣೆಗೈದಿರುವ ಇವರು ಇದುವರೆಗೆ 50ವರ್ಷಗಳಲ್ಲಿ 1500ಕ್ಕೂ ಮಿಕ್ಕಿ ವಯಕ್ತಿಕ ಹಾಗೂ ಸಮೂಹ ನೃತ್ಯ ಪ್ರದರ್ಶನ ನೀಡಿದ್ದಾರೆ. ಕಳೆದ 25 ವರ್ಷಗಳಿಂದ ಭರತನಾಟ್ಯ ವಿದ್ವತ್ ಹಾಗೂ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗೆ ಪರಿವೀಕ್ಷಕಿಯಾಗಿದ್ದಾರೆ. ಸುಮಾರು 250ಕ್ಕೂ ಮಿಕ್ಕಿ ಕನ್ನಡ, ಸಂಸ್ಕೃತ ಸಾಹಿತ್ಯ, ಕವನ, ಶ್ಲೋಕ, ಭಕ್ತಿಗೀತೆ, ಜನಪದಗೀತೆ, ಹಾಗೂ ದೇಶಭಕ್ತಿಗೀತೆಗಳಿಗೆ ಸಂಗೀತ ಹಾಗೂ ನೃತ್ಯ ಸಂಯೋಜನೆಗೈದಿದ್ದಾರೆ. ಇವರ 40ಕ್ಕೂ ಹೆಚ್ಚು ಶಿಷ್ಯೆಯರು ಇಂದು ಯಶಸ್ವಿ ನೃತ್ಯ ಶಿಕ್ಷಕಿಯಾಗಿ ವೃತ್ತಿ ನಡೆಸುತ್ತಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಪಿಲಾರ್‌ನಲ್ಲಿ ‘ತುಳು ಪರ್ಬ’ | ಫೆಬ್ರವರಿ 16
Next Article ನಾಟ್ಯಾಂಜಲಿಯ ನಲ್ವತ್ತರ ನಲಿವಿನಲಿ ‘ಚಾರುವಸಂತ’