ಬಾಯಾರು : ಬಾಯಾರು ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳ ಭಂಡಾರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 28-04-2024ರಂದು ರಾತ್ರಿ ಗಂಟೆ 9.00ರಿಂದ ಓಂ ಶ್ರೀ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಬದಿಯಾರು ಸಂಸ್ಥೆಯ ಪ್ರಯೋಜಕತ್ವದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ವು ನಡೆಯಿತು.
ಸಂಸ್ಥೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ರೆಮೊನಾ ಇವೆಟ್ ಪಿರೇರಾ, ಅವನಿ ಎಂ.ಎಸ್. ಸುಳ್ಯ, ವರ್ಷಾ ಶೆಟ್ಟಿ, ಸಾನ್ವಿ ಗುರುಪುರ, ಸಾಕ್ಷಿ ಗುರುಪುರ, ನಿತ್ಯ, ಕೃತಿ, ಸಾದ್ವಿನಿ, ಪ್ರಿಷನ್ ಶೆಟ್ಟಿ, ಜನಾರ್ದನ್, ಪೂರ್ವಿ ಶೆಟ್ಟಿ, ಧನ್ಯಶ್ರೀ, ಯುಕ್ತ, ವರ್ಷಾ ಎಂ.ಆರ್, ಭವ್ಯ ಎಸ್., ವೃಕ್ಷಾ ಎಂ.ಆರ್., ತೃಪ್ತಿ ಕೆ.ಎಸ್., ಹರ್ಷಲತಾ, ಸನುಷಾ ಸುನಿಲ್, ಅಹನಾ ಎಸ್. ರಾವ್, ಪೂಜಾಶ್ರೀ, ಜಿಯಾ ಜೆ. ಶೆಟ್ಟಿ, ಇಶಿಕಾ ಎಸ್. ಶೆಟ್ಟಿ, ಕೀರ್ತಿ ಶೆಟ್ಟಿ, ನವ್ಯ, ಶ್ರದ್ಧಾ ಎ.ಎಸ್., ಮೇಧಾ ಎ.ಎಸ್., ಧನಶ್ರೀ ಬಿ. ಶೆಟ್ಟಿ, ತ್ರಿಷಾ ಬಿ. ಶೆಟ್ಟಿ, ರೇಶ್ಮಿಪ್ರಭಾ, ಕೀರ್ತಿಪ್ರಭಾ, ನಿಶ್ಮಿಪ್ರಭಾ, ಶ್ರೀಶ, ಕೃಪೇಶ್ ಎಂ.ಆರ್., ಗ್ರುತಿಕಾ ಮೊದಲಾದ ಅತ್ಯಂತ ಅಪ್ರತಿಮ ಕಲಾ ಕುಸುಮಗಳ ಸಮ್ಮಿಲನದಿಂದ ನೆರೆದಿರುವ ಸಹಸ್ರಾರು ಪ್ರೇಕ್ಷಕರ ಮನ ಮೆಚ್ಚುವಂತೆ ಬಹಳ ವಿಜೃಂಭಣೆಯಿಂದ ಈ ಕಾರ್ಯಕ್ರಮವು ಜರುಗಿತು. ಹಲವಾರು ತರದ ನೃತ್ಯ ಪ್ರಕಾರಗಳಿಂದ ಕೂಡಿದ ಸಂಸ್ಥೆಯ ಕಾರ್ಯಕ್ರಮವು ಜನರಂಜಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಡಾ. ವಾಣಿಶ್ರೀ ಕಾಸರಗೋಡು ಅವರು ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಓಂ ಶ್ರೀ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳಾದ ಯಶೋಧರ ಬದಿಯಾರು, ಹರಿಣಾಕ್ಷ ಬದಿಯಾರು, ಅಶೋಕ ಕಲ್ಲಂಗದ್ದೆ, ಜಯರಾಜ್ ತಲ್ತಾಜೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಡಾ. ವಾಣಿಶ್ರೀ ಕಾಸರಗೋಡು ಮತ್ತು ಗುರುರಾಜ್ ಕಾಸರಗೋಡು ಇವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.