ಸಾಸ್ತಾನ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕ ಆಯೋಜಿಸುವ ‘ಸಾಹಿತ್ಯ ಪ್ರೇರಣೆ’ ಸರಣಿಯ ‘ಸಾಹಿತ್ಯ ಸಂಚಾರ – 31’ನೇ ಕಾರ್ಯಕ್ರಮವು ದಿನಾಂಕ 30 ಅಕ್ಟೋಬರ್ 2024ರ ಬುಧವಾರ ಪೂರ್ವಾಹ್ನ ಘಂಟೆ 11.00ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ, ಪ್ರೋ. ಉಪೇಂದ್ರ ಸೋಮಯಾಜಿ ಚಿತ್ರಪಾಡಿ, ಕ. ಸಾ. ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳ ಗುಂಡ್ಮಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಜಿ. ನಾಗೇಶ ಮಯ್ಯ ಹಾಗೂ ಕ. ಸಾ. ಪ. ಕೋಟ ಹೋಬಳಿಯ ಅಧ್ಯಕ್ಷರಾದ ಶ್ರೀ ಅಚ್ಚುತ ಪೂಜಾರಿ ಕಾರ್ಕಡ ಭಾಗವಹಿಸಲಿದ್ದಾರೆ.

 
									 
					