ಬೆಂಗಳೂರು : ಸಾಹಿತಿಗಳು, ಬರಹಗಾರರು ಹಾಗೂ ವಿದ್ವಾಂಸರನ್ನು ವಿಧಾನ ಸೌಧಕ್ಕೆ ಹತ್ತಿರವಾಗಿಸುವ ಉದ್ದೇಶದಿಂದ ದಿನಾಂಕ 27 ಫೆಬ್ರವರಿ 2025 ರಿಂದ 03 ಮಾರ್ಚ್ 2025ರ ವರೆಗೆ ಇದೇ ಮೊದಲ ಬಾರಿಗೆ ವಿಧಾನ ಸೌಧದ ಆವರಣದಲ್ಲಿ ಪುಸ್ತಕ ಮತ್ತು ಸಾಹಿತ್ಯ ಉತ್ಸವ ಆಯೋಜಿಸಲಾಗಿದೆ ಎಂದು ಸ್ಪೀಕರ್ ಯು. ಟಿ. ಖಾದರ್ ತಿಳಿಸಿದ್ದಾರೆ.
ಪುಸ್ತಕ ಉತ್ಸವದಲ್ಲಿ ಶೇ. 80ರಷ್ಟು ಕನ್ನಡ ಹಾಗೂ ಶೇ.20ರಷ್ಟು ಇತರ ಭಾಷೆಗಳ ಪುಸ್ತಕಗಳ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುವುದು. 150ರಷ್ಟು ಮಳಿಗೆಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ಈ ಉತ್ಸವದ ಜತೆ ಆಹಾರ ಉತ್ಸವ ಮತ್ತು ಸಾಂಸ್ಕೃ ತಿಕ ಕಾರ್ಯಕ್ರಮಗಳೂ ನಡೆಯಲಿವೆ ತಿಳಿಸಿದರು.
ಉತ್ಸವದಲ್ಲಿ ಸಾಹಿತಿಗಳು ಬರೆದ ಪುಸ್ತಕ ಬಿಡುಗಡೆಗೆ ವೇದಿಕೆ ಕಲ್ಪಿಸುವ ಜತೆಗೆ ಅತ್ಯುತ್ತಮ ಸಾಹಿತಿಯೊಬ್ಬರಿಗೆ ಪ್ರಶಸ್ತಿ ನೀಡುವ ಬಗ್ಗೆಯೂ ನಿರ್ಧರಿಸಲಾಗಿದೆ. ಉತ್ಸವದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಶಾಸಕರು ತಮ್ಮ ಕ್ಷೇತ್ರದ ಸರಕಾರಿ ಶಾಲಾ, ಕಾಲೇಜುಗಳಿಗೆ ಪೂರಕವಾಗಿ ತಲಾ 2ರಿಂದ 3 ಲಕ್ಷ ರೂಪಾಯಿ ವರೆಗೆ ತಮ್ಮ ನಿಧಿಯಿಂದ ಪುಸ್ತಕ ಖರೀದಿಸಿ ಒದಗಿಸುವ ಕುರಿತಂತೆಯೂ ಕ್ರಮ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಲಾ ಕಾಲೇಜುಗಳಿಂದ ಬೇಡಿಕೆ ಪಟ್ಟಿ ಪಡೆದುಕೊಳ್ಳಲು ತಿಳಿಸಲಾಗುತ್ತಿದೆ. ಐ. ಎ. ಎಸ್., ಕೆ. ಎ. ಎಸ್. ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಶಾಸಕರು ತಮ್ಮ ಕ್ಷೇತ್ರದ ಸರಕಾರಿ ಶಾಲಾ ಕಾಲೇಜುಗಳಿಗೆ ಒದಗಿಸಬಹುದು. ಈ ಬಗ್ಗೆ ಶಾಸಕರಿಗೆ ಪತ್ರ ಬರೆಯಲಾಗಿದೆ. ಪುಸ್ತಕ ಉತ್ಸವದಲ್ಲಿ ಇತರ ಕಡೆಗಿಂತ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಪುಸ್ತಕ ಒದಗಿಸಲು ಪುಸ್ತಕ ಮಾರಾಟಗಾರರಿಗೆ ಸೂಚನೆ ನೀಡಲಾಗುತ್ತದೆ. ಈ ಉತ್ಸವಕ್ಕಾಗಿ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ತಿಳಿಸಲಾಗಿದ್ದು, ಸಾಹಿತಿಗಳನ್ನು ಒಳಗೊಂಡ ಸಮಿತಿಯು ಅಗತ್ಯ ಸಿದ್ದತೆಗಳು, ಪ್ರಶಸ್ತಿಗೆ ಸಾಹಿತಿ ಆಯ್ಕೆ ಸೇರಿದಂತೆ ಉತ್ಸವದ ರೂಪುರೇಷೆಗಳನ್ನು ದ್ದಪಡಿಸಲಿದೆ. ಇದೇ ವೇಳೆ ಸಾರ್ವಜನಿಕರಿಂದ ಉತ್ಸವಕ್ಕೆ ಲೋಗೋ ಹಾಗೂ ಹೆಸರು ಸೂಚಿಸಲು ಆಹ್ವಾನ ನೀಡಲಾಗಿದ್ದು, ಆಸಕ್ತರು [email protected] ಅಥವಾ 59448108798 ಸಂಖ್ಯೆಯ ಮೂಲಕ ಹೆಸರು, ಲೋಗೋ ಸೂಚಿಸಬಹುದು ಎಂದು ತಿಳಿಸಿದರು.
Subscribe to Updates
Get the latest creative news from FooBar about art, design and business.
Previous Articleಹಿರಿಯ ಯಕ್ಷಗಾನ ಕಲಾವಿದ ಕೆ. ವಿ. ಗಣಪಯ್ಯ ನಿಧನ