ಮಂಡ್ಯ : ಮಂಡ್ಯದ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಫಾರ್ ಡಿಫರೆಂಟ್ಲಿ ಏಬಲ್ಡ್ (ರಿ.) (ಸಕಾಡ) ಹಾಗೂ ಮಂಡ್ಯ ಜಿಲ್ಲೆಯ ಆಶಾಸದನ ವಿಶೇಷ ಶಾಲೆಯ ಸಹಯೋಗದೊಂದಿಗೆ ಆಯೋಜಿಸಿದ ‘ಸಕಾಡೋತ್ಸವ-2025’ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 11 ಮತ್ತು 12 ಜನವರಿ 2025 ರಂದು ಮಂಡ್ಯ ಜಿಲ್ಲೆಯ ಸುಭಾಷ್‌ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಒಟ್ಟು 30 ಸಂಸ್ಥೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ಸಂಸ್ಥೆ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು ಮಾತ್ರವಲ್ಲ, ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯು ಫಲಕ ಹಾಗೂ ನಗದು ಬಹುಮಾನವನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಬ್ಯಾಂಡ್ ಮಾಸ್ಟರ್ ಶ್ರೀ ಪ್ರೇಮ್ ಮೋರಸ್ ಇವರ ನೇತೃತ್ವದಲ್ಲಿ ಸಾನಿಧ್ಯ ವಿಶೇಷ ಮಕ್ಕಳ ತಂಡವು ಬ್ಯಾಂಡ್ ನುಡಿಸಿ ಜನರ ಮೆಚ್ಚುಗೆ ಗಳಿಸಿತು.
Subscribe to Updates
Get the latest creative news from FooBar about art, design and business.
Previous Articleಬಹುರೂಪಿ ನಾಟಕೋತ್ಸವದಲ್ಲಿ ಯಶಸ್ವೀ ಕಲಾವೃಂದದ ಕಲಾವಿದರಿಂದ ‘ಕೃಷ್ಣಾರ್ಜುನರ ಕಾಳಗ’ ಯಕ್ಷಗಾನ ಪ್ರದರ್ಶನ
Next Article ವಿಶೇಷ ಲೇಖನ – ತಬಲವಾದ್ಯ ಗಾರುಡಿಗ ಪಂಡಿತ್ ರಘುನಾಥ್ ನಾಕೋಡ್