ಮಂಗಳೂರು : ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್‌ನ ಸದಸ್ಯರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ದಿನಾಂಕ 19 ಡಿಸೆಂಬರ್ 2025ರಂದು ‘ಸಾಹೇಬರು ಬರುತ್ತಾರೆ’ ನಾಟಕವನ್ನು ಪ್ರದರ್ಶಿಸಿದರು.

ನಾಟಕದ ಉದ್ಘಾಟನೆಯನ್ನು ಡಾ. ಆರ್. ನರಸಿಂಹ ಮೂರ್ತಿ ನೆರವೇರಿಸಿದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿನ್ ಎಸ್.ಜೆ. ನಾಟಕಕ್ಕೆ ಶುಭಹಾರೈಸಿದರು. ತ್ರಿಪುರಾದ ಇಂಟರ್ ಕಲ್ಚರ್ ಥಿಯೇಟರ್ ಇನ್‌ಸ್ಟಿಟ್ಯೂಟ್ (ಐ.ಸಿ.ಟಿ.ಐ.)ನ ಪ್ರೊಫೆಷನಲ್ ಡಿಪ್ಲೊಮಾ ತರಬೇತಿಗೆ ಆಯ್ಕೆಯಾಗಿರುವ ಅವಿನಾಶ್ ರೈ ಕುಂಬ್ಳೆ ಇವರನ್ನು ಗೌರವಿಸಲಾಯಿತು.




ತ್ರಿಪುರಾದ ಐ.ಸಿ.ಟಿ.ಐ.ನ ದ್ವಿತೀಯ ವರ್ಷದ ವಿದ್ಯಾರ್ಥಿ ಜರ್ನಿಯ ಸದಸ್ಯ ಮನೀಷ್ ಜೆ. ಪಿಂಟೋ, ನಾಟಕ ನಿರ್ದೇಶಕ ಚೇತನ್ ಗಣೇಶಪುರ, ಜರ್ನಿಯ ಶಶಾಂಕ್ ಐತಾಳ್ ಮತ್ತು ಮೇಘನಾ ಕುಂದಾಪುರ ಉಪಸ್ಥಿತರಿದ್ದರು. ಬಳಿಕ ನಿಕೋಲಾಯ್ ಗೊಗೋಲ್ ನ ‘ದಿ ಗವರ್ನಮೆಂಟ್ ಇನ್‌ಸ್ಪೆರ್ಕ್ಷ’ನ್ನು ಕೆ.ವಿ. ಅಕ್ಷರ ಮತ್ತು ಕೆ.ವಿ. ಸುಬ್ಬಣ್ಣ ಕನ್ನಡ ಅನುವಾದಿಸಿದ ‘ಸಾಹೇಬರು ಬರುತ್ತಾರೆ’ ನಾಟಕ ಪ್ರದರ್ಶನಗೊಂಡಿತು.



ಈ ನಾಟಕವನ್ನು ಯುವ ನಿರ್ದೇಶಕ ಚೇತನ್ ಗಣೇಶಪುರ ನಿರ್ದೇಶಿಸಿದ್ದರು. ನಾಟಕದಲ್ಲಿ ಮಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮೊದಲ ಬಾರಿಗೆ ರಂಗದಲ್ಲಿ ಅಭಿನಯಿಸಿದರು. ರಾಜೇಶ್ ಉಳ್ಳಾಲ ಧ್ವನಿ, ಶ್ರಾವಿಕ್ ಅಡ್ಕ ಬೆಳಕು, ವರುಣ್ ವಿ. ಆಚಾರ್ಯ ಸಂಗೀತ ನಿರ್ವಹಣೆ, ಚಿನ್ಮಯಿ ವಿ. ಭಟ್, ಮೇಘನಾ ಕುಂದಾಪುರ ಹಾಡಿನಲ್ಲಿ ಸಹಕರಿಸಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರ ಸಹಯೋಗವನ್ನು ನೀಡಿತ್ತು.
