ಕಾಸರಗೋಡು : ಶ್ರೀಮದ್ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ದಿನಾಂಕ 16-09-2023ರಂದು ಜರಗತು.
ಕಲಾವಿದರಾದ ಗುರುರಾಜ್ ಕಾಸರಗೋಡು, ಅವನಿ ಎಂ.ಎಸ್. ಸುಳ್ಯ, ಸನುಷಾ ಸುನೀಲ್, ಪ್ರಥಮ್ಯ ಯು.ವೈ., ಶ್ರೀರಕ್ಷಾ ಸರ್ವಂಗಳ, ಅಹನಾ ಎಸ್.ರಾವ್, ತನ್ವಿ ಶೆಟ್ಟಿ ಪಾಣಾಜೆ, ಜ್ಞಾನ ರೈ ಪುತ್ತೂರು, ಆಜ್ಞಾ ರೈ ಪುತ್ತೂರು, ಉಷಾ ಸುಧಾಕರನ್, ವರ್ಷಾ ಶೆಟ್ಟಿ, ಬಂಬ್ರಾಣ, ಶ್ರದ್ಧಾ ಎ.ಎಸ್., ಭಾನ್ವಿ ಕುಲಾಲ್, ಮೇಧಾ ಎ.ಎಸ್., ಸನುಷಾ ಸುಧಾಕರನ್, ಶ್ವೇತಾ ಯು.ವೈ.ನೆಲ್ಯಾಡಿ, ಆದ್ಯಂತ ಅಡೂರು, ಶ್ರೀಶ ಎಂ.ಎಸ್., ಅಭಿನವ ಶಿವರಾಮ, ಧನ್ವಿತ್ ಕೃಷ್ಣ, ಅಸ್ತಾ ಶೆಟ್ಟಿ, ದೃತಿಕ್ ಆರ್.ರೈ, ಪೂಜಾ, ಕೀರ್ತಿ ಬಿ. ಮುಂತಾದವರು ಅತ್ಯದ್ಭುತ ಕಲಾ ಪ್ರದರ್ಶನ ನೀಡಿದರು.
ಸಂಪೂರ್ಣ ಕಾರ್ಯಕ್ರಮದ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಸಂಸ್ಥೆ ಅಧ್ಯಕ್ಷೆ ಡಾ.ವಾಣಿಶ್ರೀ ಕಾಸರಗೋಡು ನಿರ್ವಹಿಸಿದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಗಡಿನಾಡ ಸಂಸ್ಥೆಯ ಪದಾಧಿಕಾರಿಗಳಾದ ಡಾ.ವಾಣಿಶ್ರೀ ಕಾಸರಗೋಡು ಹಾಗೂ ಗುರುರಾಜ್ ಕಾಸರಗೋಡು ಅವರನ್ನು ಶಾಲು ಹೊದಿಸಿ ಆಶೀರ್ವದಿಸಿದರು. ಭಾಗವಹಿಸಿದ ಕಲಾವಿದರಿಗೆ
ಸ್ವಾಮೀಜಿ ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಸೂರ್ಯನಾರಾಯಣ ಭಟ್ ಅವರು ಸ್ವಾಗತಿಸಿ, ವಂದಿಸಿದರು.