ಕೊಡಗು : ಕುಶಾಲನಗರದ ‘ಕನ್ನಡಸಿರಿ ಸ್ನೇಹ ಬಳಗ’ ಮತ್ತು ‘ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು’ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಗಟ್ಟಿಮೇಳದೊಂದಿಗೆ ‘ಸಾಹಿತ್ಯ ಸಂಭ್ರಮ’ವು ದಿನಾಂಕ 18-02-2024ರಂದು ವಿರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಚಿ. ಸೌ. ಕಾವ್ಯಶ್ರೀ ಮತ್ತು ಚಿ.ರಾ. ರಾಜು ಸಿ. ಇವರ ವಿವಾಹೋತ್ಸವದ ಗಟ್ಟಿಮೇಳದೊಂದಿಗೆ ಗಾಯನ ಗೋಷ್ಠಿ, ಹನಿಗವನದ ಕವಿಗೋಷ್ಠಿ ಮತ್ತು ಖ್ಯಾತ ಸಾಹಿತಿ ಕಿಗ್ಗಾಲು ಎಸ್. ಗಿರೀಶ್ರವರ ‘ಮಾಯವಾದ ಮಾಯಾಂಗನೆ’ ಎಂಬ ಕೃತಿ ಲೋಕಾರ್ಪಣೆ ಇರುತ್ತದೆ. ಕವಿ ಹಾಗೂ ಕವಯತ್ರಿಯರಿಗೆ ತಪ್ಪದೇ ಆರು ಸಾಲಿನ ಹನಿಗವನ (ದಾಂಪತ್ಯ ಕುರಿತು) ಅಥವಾ ನಾಲ್ಕು ಸಾಲಿನ ಒಂದು ಚುಟುಕು ವಾಚನಕ್ಕೆ ಅವಕಾಶ ಇದೆ. ಕವನ ವಾಚನ ಮಾಡಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಗುವುದು.