ಮೈಸೂರು : ಕಲಾಸುರುಚಿ ಮೈಸೂರು ಇದರ ವತಿಯಿಂದ ‘ಸಾಹಿತ್ಯ ಚಾವಡಿ’ ಸಂವಾದ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2025 ಭಾನುವಾರ ಬೆಳಿಗ್ಗೆ ಗಂಟೆ 10-30ಕ್ಕೆ ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ನಂ.476, ಸುರುಚಿ ರಂಗಮನೆಯಲ್ಲಿ ಆಯೋಜಿಸಲಾಗಿದೆ.
ಸಂವಾದ ಕಾರ್ಯಕ್ರಮದಲ್ಲಿ ‘ಅಂಕಣ ಸಾಹಿತ್ಯ ಸಾಧ್ಯತೆ, ಸವಾಲು ಮತ್ತು ಸಿದ್ಧತೆ’ ಎಂಬ ವಿಷಯದ ಬಗ್ಗೆ ಲೇಖಕ ಎನ್. ರವಿಶಂಕರ್ ಹಾಗೂ ಹಾಗೂ ಕಲಾವಿದೆ ಶ್ರೀಮತಿ ದೀಪಾ ರವಿಶಂಕರ್ ಇವರೊಂದಿಗೆ ಸಂವಾದಕರಾಗಿ ಲೇಖಕಿ ಶ್ರೀಮತಿ ಅಲಕಾ ಕಟ್ಟೆಮನೆ ಮತ್ತು ಲೇಖಕ ಅಜಯ್ ಸ್ವರೂಪ್ ಭಾಗವಹಿಸಲಿದ್ದಾರೆ.