ಧಾರವಾಡ : 2025ನೆಯ ಸಾಲಿನಲ್ಲಿ ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಇನ್ನಷ್ಟು ಅರ್ಥಪೂರ್ಣ ಮತ್ತು ವಿಸ್ತಾರಗೊಳ್ಳಲಿವೆ. ಸಾಹಿತ್ಯ ಗಂಗಾ ಸಂಸ್ಥೆಯು ‘ಸಾಹಿತ್ಯ ಗಂಗಾ ಕಥಾಮಾಲೆ’ ಯೋಜನೆಯ ಮೂಲಕ ಹಲವು ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುವ ಮತ್ತು ಅವರಿಗೊಂದು ವೇದಿಕೆ ಒದಗಿಸುವ ಕೆಲಸ ಮಾಡಲಿದೆ.
ಸಾಹಿತ್ಯಿಕ ರಾಜಕೀಯದಿಂದ ದೂರವಿರುವ, ಪ್ರಕಟಣೆಯ ಸೌಲಭ್ಯ ಕಠಿಣವಾದ ಪ್ರತಿಭಾನ್ವಿತ ಬರಹಗಾರರ ಪುಸ್ತಕ ಪ್ರಕಟಣೆಗೆ ನೆರವು ನೀಡಲಾಗುವುದು.
ಕೃತಿ ಪ್ರಕಟಣೆಗೆ ಧನ ಸಹಾಯ ನೀಡಲಾಗುವುದಿಲ್ಲ. ಕೆಲವು ಉತ್ಸಾಹಿ ಪ್ರಕಾಶಕರ ನೆರವಿನೊಂದಿಗೆ ಪ್ರಕಟಿಸಲಾಗುವುದು.
ಕೇವಲ ಸ್ವತಂತ್ರ ಮತ್ತು ಅಪ್ರಕಟಿತ ಕಥಾಸಂಕಲನ ಹಾಗೂ ಕಾದಂಬರಿಗಳನ್ನು ಮಾತ್ರ ಪ್ರಕಟಿಸಲಾಗುವುದು.
ಜಾತಿ, ಲಿಂಗ, ವಯೋಮಿತಿ, ಪ್ರದೇಶ ಸೇರಿದಂತೆ ಯಾವುದೇ ರೀತಿಯ ಕೃತಕ ಮಾನದಂಡಗಳಿರುವುದಿಲ್ಲ. ಕೃತಿಯ ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ.
ಆಸಕ್ತ ಲೇಖಕ/ಲೇಖಕಿಯರು ತಮ್ಮ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಪ್ರಕಟಿಸಬೇಕೆಂದಿರುವ ಕೃತಿಯ ಆಯ್ದ ಭಾಗಗಳ ಸಾಫ್ಟ್ ಕಾಪಿಯನ್ನು ನಮಗೆ ವಾಟ್ಸಪ್ ಅಥವಾ ಈಮೇಲ್ ಮೂಲಕ ಕಳಿಸಿ.
ಆಸಕ್ತರು ಅಗತ್ಯ ಮಾಹಿತಿಯನ್ನು ದಿನಾಂಕ 27 ಫೆಬ್ರುವರಿ 2025ರೊಳಗೆ + 91 9110687473 ನಂಬರಿಗೆ ವಾಟ್ಸಪ್ ಮಾಡಿ.