ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ ಇದರ ವತಿಯಿಂದ ‘ಸಾಹಿತ್ಯ ಹುಣ್ಣಿಮೆ’ 235ನೆಯ ತಿಂಗಳ ಕಾರ್ಯಕ್ರಮವನ್ನು ದಿನಾಂಕ 24 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಶಿವಮೊಗ್ಗದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಇದರ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪ್ರಿಯದರ್ಶಿನಿ ಪ್ರೌಢ ಶಾಲಾ ಸಮಿತಿ ಅಧ್ಯಕ್ಷರಾದ ಎನ್. ರಮೇಶ್ ಇವರು ಉದ್ಘಾಟನೆ ಮಾಡಲಿರುವರು. ಶಿವಮೊಗ್ಗದ ಝೇಂಕಾರ ಸಿಂಗರ್ಸ್ ಇದರ ಬಸವರಾಜ್ ಮತ್ತು ತಂಡ, ಶ್ರೀಮತಿ ಶಾಂತಾ ಆನಂದ, ಅಮರನಾಥ, ಶ್ರೀಮತಿ ಸುಶೀಲಾ ಷಣ್ಮುಗಂ ಮತ್ತು ಶ್ರೀಮತಿ ಲೀಲಾವತಿ ಇವರಿಂದ ಹಾಡು, ಮೇಗರವಳ್ಳಿ ರಮೇಶ್, ಶ್ರೀಮತಿ ಎಸ್.ವಿ. ಚಂದ್ರಕಲಾ, ಶ್ರೀಮತಿ ಮಾಲಾ ರಾಮಚಂದ್ರ, ಶ್ರೀಮತಿ ಶಾರದಾ ಉಳುವೆ, ಶ್ರೀಮತಿ ಜ್ಞಾನ್ನವಿ ಆರ್. ಇವರಿಂದ ಕವನ ವಾಚನ, ಶ್ರೀಮತಿ ವಿಜಯಾ ಶ್ರೀಧರ, ಆರ್. ರತ್ನಯ್ಯ ಅವರ ಕಥೆ ಕೆ.ಎಸ್. ಮಂಜಪ್ಪ ವಾಚಿಸಲಿದ್ದಾರೆ. ಶಿವಮೊಗ್ಗದ ಚಲನಚಿತ್ರ ನಟರು ಹಾಸ್ಯ ಕಲಾವಿದರಾದ ಗಂಗಾಧರ ಎಸ್. ಇವರಿಂದ ಹಾಸ್ಯ ಮತ್ತು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿಗಳಾದ ಡಿ. ಗಣೇಶ್ ಇವರಿಂದ ಹನಿಗವನ ವಾಚನ ಪ್ರಸ್ತುತಗೊಳ್ಳಲಿದೆ.