ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಗಾಡಿಕೊಪ್ಪ ಶಿವಮೊಗ್ಗ ಇವರ ಸಹಯೋಗದಲ್ಲಿ 239ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ದಿನಾಂಕ 10 ಜುಲೈ 2025ರಂದು ಸಂಜೆ 6-00 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಐ.ಎ.ಎಸ್. ಇವರು ಉದ್ಘಾಟನೆ ಮಾಡಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಅಧ್ಯಕ್ಷತೆ ವಹಿಸಲಿರುವರು. ಹಿರಿಯ ಸಾಹಿತಿ ಡಾ. ಶಾಂತಾರಾಮ ಪ್ರಭುಗಳು ಮಾತು – ಮಂಥನ ಕಾರ್ಯಕ್ರಮ ನಡೆಸಲಿದ್ದು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಶಪ್ಪ ಡಿ. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆ.ಎಸ್. ಮಂಜಪ್ಪ, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಸವಿತಾ, ಶ್ರೀಮತಿ ನಳಿನಿ ನಾರಾಯಣ ಇವರಿಂದ ಹಾಡು, ಕುಮಾರಿ ಗೌರಿಶ್ರೀ, ವಾಗೀಶ್ ಆರಾಧ್ಯ ಮಠ, ಎಂ. ನವೀನ್ ಕುಮಾರ್ ಇವರಿಂದ ಕವನ, ಪ್ರೊ. ಸತ್ಯನಾರಾಯಣ ಇವರಿಂದ ಹನಿಗವನ ಹಾಗೂ ಮೋಹನ್ ಕುಮಾರ್ ಇವರಿನ ಹಾಸ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.