ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬ್ರಹ್ಮಾವರ ತಾಲೂಕು ಘಟಕ ಇದರ ವತಿಯಿಂದ ಸಾಹಿತ್ಯ ಸಂಚಾರ -43ನೇ ಸರಣಿಯ ‘ಸಾಹಿತ್ಯ ಪ್ರೇರಣೆ’ ಕಾರ್ಯಕ್ರಮವನ್ನು ದಿನಾಂಕ 01 ಮಾರ್ಚ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಆವರ್ಸೆ ಬ್ರಹ್ಮಾವರ ತಾಲೂಕು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಕ.ಸಾ.ಪ. ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ ಗುಂಡ್ಮಿ, ಕ.ಸಾ.ಪ. ಕೋಟ ಹೋಬಳಿಯ ಅಧ್ಯಕ್ಷರಾದ ಅಚ್ಚುತ ಪೂಜಾರಿ ಕಾರ್ಕಡ, ಯಕ್ಷಗಾನ ಶಿಕ್ಷಕ ನರಸಿಂಹ ತುಂಗ ಮತ್ತು ಸಂಗೀತ ಶಿಕ್ಷಕಿ ಶ್ರೀಮತಿ ಭಾಗ್ಯೇಶ್ವರಿ ಮಯ್ಯ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.