ಕೊಡಗು : ಕೊಡಗಿನ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ಸಂಸ್ಥಾಪಕ ವೈಲೇಶ್ ಪಿ.ಎಸ್. ಕೊಡಗು ಇವರ ಪುತ್ರಿ ಕಾವ್ಯಶ್ರೀ ಮತ್ತು ಮೈಸೂರು ಜಿಲ್ಲೆ ಬಿಳಿಕೆರೆ ಹೋಬಳಿಯ ಚೆಲುವರಾಜು ಇವರ ಪುತ್ರ ರಾಜು ಸಿ. ಇವರ ವಿವಾಹವು ದಿನಾಂಕ 18-02-2024ರಂದು ವಿರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದಲ್ಲಿ ಜರುಗಿತು. ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗ ಕುಶಾಲನಗರ ಮತ್ತು ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು, ಕೊಡಗು ಜಿಲ್ಲೆ ಸಂಘಟನೆಗಳ ಜಂಟಿ ಆಶ್ರಯದಲ್ಲಿ ‘ಗಟ್ಟಿಮೇಳದೊಂದಿಗೆ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಕವಿಗಳಾದ ಗಿರೀಶ್ ಕಿಗ್ಗಾಲುರವರ ‘ಮಾಯವಾದ ಮಾಯಾಂಗನೆ’ ಹಾಗೂ ಮತ್ತೋರ್ವ ಹಿರಿಯ ಸಾಹಿತಿಗಳಾದ ಜಯಪ್ರಕಾಶ್ ರಾವ್‌ರವರ ‘ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಇಪ್ಪತ್ತಕ್ಕೂ ಹೆಚ್ಚಿನ ಕವಿಗಳಿಂದ ಕವನ ವಾಚನದ ಜೊತೆಗೆ ಬಹಳಷ್ಟು ಗಾಯಕರಿಂದ ಗೀತಗಾಯನ ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಕವಿ ಮತ್ತು ಪ್ರಕಾಶಕರಾದ ರೇಣುಕಾ ವೈಕುಂಟಯ್ಯ, ಹಾಸನದ ಕವಿಗಳಾದ ಕುಮಾರ್ ಛಲವಾದಿ, ಹೆಚ್.ಎಲ್. ಚೆನ್ನೇಗೌಡ, ಮಾಳೇಟಿರ ಸೀತಮ್ಮ ವಿವೇಕ್, ಮೈಸೂರಿನ ಕುಮುದ ಹಾಸನ, ಉಡುಪಿಯ ಪ್ರೇಮಾ ರಮೇಶ್ ಶೆಟ್ಟಿ ಮತ್ತು ಎರಡೂ ಸಂಘಟನೆಗಳ ಲೋಕೇಶ್ ಸಾಗರ್, ಜವರಪ್ಪ, ಮಾಲಾದೇವಿ ಮೂರ್ತಿ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಈರಮಂಡ ಹರಿಣಿ ವಿಜಯ್, ಗೌರಮ್ಮ ಮಾದಮ್ಮಯ್ಯ, ಮೊಣ್ಣಂಡ ಶೋಭಾ ಸುಬ್ಬಯ್ಯ, ಅಂಬೆಕಲ್ಲು ಸುಶೀಲಾ ಕುಶಾಲಪ್ಪ, ಸುಮಿ ಪೊನ್ನಂಪೇಟೆ, ಪುಷ್ಪಾ ಪೂವಯ್ಯ, ಭಾಗ್ಯವತಿ ಅಣ್ಣಪ್ಪ, ಸುಪ್ರೀತ ದಿಲೀಪ್, ಚೆಟ್ಟೋಳಿರ ಶರತ್ ಸೋಮಣ್ಣ, ಚಿಮ್ಮಚ್ಚಿರ ಪವಿತ ರಜನ್, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಅಪ್ಪಚಟ್ಟೋಳಂಡ ವನು ವಸಂತ, ಟಿ.ಆರ್. ವಿನೋದ್, ವತ್ಸಲಾ ಶ್ರೀಶ, ಕರವಂಡ ಸೀಮಾ ಗಣಪತಿ, ಎಂ.ಎಸ್. ಪೂವಯ್ಯ, ಮಧುಸೂದನ್ ಬೆಳಗುಲಿ, ವಿಮಲ ದಶರಥ, ನೋಬಿನ್ ಸಿಂಗರ್ ಮತ್ತಿತರ ಕವಿಗಳು, ಗಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೊಡಗಿನ ಸಾಹಿತ್ಯ ಲೋಕದಲ್ಲಿ ಒಂದು ವಿಭಿನ್ನವಾದ ಕಾರ್ಯಕ್ರಮಕ್ಕೆ ನಾಂದಿ ಹಾಡಲು ಕಾರಣರಾದ ಗಿರೀಶ್ ಕಿಗ್ಗಾಲು, ಜಯಪ್ರಕಾಶ್ ರಾವ್ ಹಾಗೂ ವೈಲೇಶ್ ಪಿ.ಎಸ್. ಕೊಡಗುರವರನ್ನೂ ಸನ್ಮಾನಿಸಿ ಗೌರವಿಸಲಾಯಿತು.