ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿಯವರು ಅನಿಕೇತನ ಕನ್ನಡ ಬಳಗ ಮತ್ತು ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟಿನ ಸಹಕಾರದಲ್ಲಿ ದಿನಾಂಕ 08 ನವೆಂಬರ್ 2025ರಂದು ಶನಿವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು, ಶರಣ ಸಂಸ್ಕೃತಿ ಚಿಂತಕಿ ಶ್ರೀಮತಿ ಪುಷ್ಪಾ ಬಸವರಾಜ ಬಣಕಾರ್ ಇವರ ಸರ್ವಾಧ್ಯಕ್ಷತೆಯಲ್ಲಿ ‘ರಾಜ್ಯ ಮಟ್ಟದ ಆರನೇ ಮಹಿಳಾ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ 2025’ವನ್ನು ಏರ್ಪಡಿಸಲಾಗಿದೆ.
ಸಮಾವೇಶವನ್ನು ಹಿರಿಯ ಲೇಖಕಿ ಡಾ. ಕೆ. ಷರೀಫಾ ಇವರು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡರು 10 ಮಂದಿ ಸಾಧಕರಿಗೆ ‘ಗಾಂಧಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡುವರು. ನಂತರ ನಡೆಯುವ ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಕುಂಚ ಕಲಾವಿದೆ ಶ್ರೀಮತಿ ಶಾಂತಿ ವಾಸು ವಹಿಸುವರು, ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಲೇಖಕಿ ಇಂದಿರಾ ಕೃಷ್ಣಪ್ಪ ಇವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಮಂದಿ ಮಹನೀಯರಿಗೆ ‘ಬಿಎಂಶ್ರೀ ಪುಸ್ತಕ ಪ್ರಶಸ್ತಿ’ ಮತ್ತು ‘ಅನಿಕೇತನ ಪ್ರಶಸ್ತಿ’ ಪ್ರದಾನ ಮಾಡುವರು, ಬೆಳಗಾವಿಯ ಹಿರಿಯ ಸಾಹಿತಿಗಳಾದ ಸುರೇಶ್ ಕೋರಕೊಪ್ಪ ಇವರು ಸಮಾರೋಪ ಭಾಷಣ ಮಾಡುವರು, ವೇದಿಕೆಯಲ್ಲಿ ಲಯನ್ ಮಂಗಳಗೌರಿ ಅರಸು, ವಕೀಲರಾದ ನಂಜಪ್ಪ ಕಾಳೇಗೌಡ್ರು, ದತ್ತಿ ದಾನಿಗಳಾದ ಕೆ. ಕೃಷ್ಣಮೂರ್ತಿ ಪೂಜಾರಿ ಪಾಳ್ಯ, ಆಂಗ್ಲ ಭಾಷೆಯ ಪ್ರಾಧ್ಯಾಪಕ ಡಾ. ವಿ. ಮುರಳಿ ಮೋಹನ್, ಕವಯಿತ್ರಿ ಶಾಂತಲಾ ಸುರೇಶ್, ಸಾಹಿತಿ ಡಾ. ಆರ್. ವಾದಿರಾಜ್, ಉಪನ್ಯಾಸಕರ ಸಂಘದ ಪ್ರೊ. ಎಸ್.ಆರ್. ವೆಂಕಟೇಶ್, ಲೇಖಕಿ ಹಾ.ನೀ. ಮಂಜುಳಾ ಶಿವಾನಂದ, ಕದಳಿ ವೇದಿಕೆಯ ಗೀತಾ ಸತೀಶ್, ಸಾಹಿತಿ ಅಂಬುಜಾ ಪ್ರಕಾಶ್, ದತ್ತಿದಾನಿ ಡಾ. ಕೃಷ್ಣಪ್ಪ ಕೋಡಿಪಾಳ್ಯ, ಅನಿಕೇತನ ಮಾಯಣ್ಣ ಡಾ. ಶರತ್ ಚಂದ್ರ ಜಿ. ರಾನಡೆ, ಪ್ರೊ. ಲೀಲಾವಾಸುದೇವ್, ಗುಣಸಾಗರಿ ಸಿ. ನಾಗರಾಜ್ ಭಾಗವಹಿಸಲಿದ್ದಾರೆ. ಕನ್ನಡ ಪ್ರಾಧ್ಯಾಪಕರುಗಳಾದ ಡಾ. ಪ್ರಿಯದರ್ಶಿನಿ ಎಂ., ಡಾ. ಜಿ.ಬಿ. ಮಹೇಶ್ವರಿ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಗೀತ ಸಂಗೀತ, ನೃತ್ಯ ವೈಭವ, ಕವಿತಾ ವಾಚನ, ಹಾಸ್ಯ ಕಾರ್ಯಕ್ರಮ ಮುಂತಾದ ಮನರಂಜನೆ ಇರುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸಿ. ಹೇಮಾವತಿ ಸಿಸಿರಾ ತಿಳಿಸಿದ್ದಾರೆ.

									 
					