ತುಮಕೂರು : ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲೆ ಇದರ ವತಿಯಿಂದ ‘ಸಾಹಿತ್ಯ ಸಂವಾದ’ ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ ವಿಷಯದ ಕುರಿತು ರಾಜ್ಯಮಟ್ಟದ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2025ರಂದು ಬೆಳಗ್ಗೆ 10-15 ಗಂಟೆಗೆ ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಆಯೋಜಿಸಲಾಗಿದೆ.
ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ ದಾಸ್ ಇವರು ಕಾವ್ಯ ಗಾಯನದ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ದೊರೈರಾಜ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಬರಗೂರು ರಾಮಚಂದ್ರಪ್ಪ ಇವರು ದಿಕ್ಸೂಚಿ ನುಡಿಗಳನ್ನಾಡಲಿದ್ದು, ಡಾ. ಕರೀಗೌಡ ಬೀಚನಹಳ್ಳಿ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೋಷ್ಠಿ 1ರಲ್ಲಿ ‘ಕನ್ನಡ ಸಾಹಿತ್ಯ ಮತ್ತು ದಲಿತ ಚಳವಳಿಯ ಆಶಯಗಳು’ ಎಂಬ ವಿಷಯದ ಬಗ್ಗೆ ಡಾ. ಬಿ.ಎಂ. ಪುಟ್ಟಯ್ಯ, ಗೋಷ್ಠಿ 2ರಲ್ಲಿ ‘ಕನ್ನಡ ಸಾಹಿತ್ಯ ಮತ್ತು ಮಹಿಳಾ ಚಳವಳಿಯ ವಿಕಾಸ’ ಎಂಬ ವಿಷಯದ ಬಗ್ಗೆ ಡಾ. ಎನ್. ಗಾಯತ್ರಿ, ಗೋಷ್ಠಿ 3ರಲ್ಲಿ ‘ಕನ್ನಡ ಸಾಹಿತ್ಯ ಮತ್ತು ಕನ್ನಡ ಪರ ಚಳವಳಿಯ ಚಾರಿತ್ರೀಕತೆ’ ಎಂಬ ವಿಷಯದ ಬಗ್ಗೆ ಡಾ. ಪ್ರಶಾಂತ್ ನಾಯಕ್, ಗೋಷ್ಠಿ 4ರಲ್ಲಿ ಗೋಷ್ಠಿ ‘ಕನ್ನಡ ಸಾಹಿತ್ಯ ಮತ್ತು ರೈತ-ಕಾರ್ಮಿಕ ಚಳವಳಿಯ ವಸ್ತು ವಿನ್ಯಾಸ’ ಎಂಬ ವಿಷಯದ ಬಗ್ಗೆ ಡಾ. ದಸ್ತಗೀರ್ ಸಾಬ್ ದಿನ್ನಿ ಇವರುಗಳು ಉಪನ್ಯಾಸ ನೀಡಲಿದ್ದಾರೆ. ಸಂಜೆ 5-30 ಗಂಟೆಗೆ ಶ್ರೀಮತಿ ಮಲ್ಲಿಕಾ ಬಸವರಾಜು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಆಸಕ್ತರು ವಿವರಗಳಿಗೆ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಸಂಚಾಲಕರಾದ ನಾಗಭೂಷಣ್ : 9964852518 ಮತ್ತು ಓ. ನಾಗರಾಜ್ : 9448659646 ಇವರನ್ನು ಸಂಪರ್ಕಿಸಬಹುದು.