ಉಪ್ಪಳ : ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ನಡೆಯುವ ವಿಷು ಜಾತ್ರಾಮಹೋತ್ಸವದ ಪ್ರಯುಕ್ತ ‘ಸಾಹಿತ್ಯಗಾನ ನೃತ್ಯ ವೈಭವ’ ಮತ್ತು ‘ಗಾನಾರ್ಪಣಂ’ ಕಾರ್ಯಕ್ರಮವನ್ನು ದಿನಾಂಕ 13 ಮತ್ತು 14 ಏಪ್ರಿಲ್ 2025ರಂದು ಶ್ರೀ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 13 ಏಪ್ರಿಲ್ 2025ರಂದು ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯವರಿಂದ ‘ಸಾಹಿತ್ಯಗಾನ ನೃತ್ಯ ವೈಭವ’ ಹಾಗೂ ದಿನಾಂಕ 14 ಏಪ್ರಿಲ್ 2025ರಂದು ಆಕಾಶವಾಣಿ ಕಲಾವಿದೆ ಸಂಗೀತ ಕಲಾಸಿರಿ ಶ್ರೀಮತಿ ಮಂಜುಳಾ ಜಿ. ರಾವ್ ಇರಾ ಇವರಿಂದ ‘ಗಾನಾರ್ಪಣಂ’ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.