ಮಂಗಳೂರು : ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಂಸ್ಥೆಯ 18ನೇ ವಾರ್ಷಿಕ ಸಂಭ್ರಮಾಚರಣೆಯ ನಿಮಿತ್ತವಾಗಿ ‘ಸಾಹಿತ್ಯೋತ್ಸವ’ ಕಾರ್ಯಕ್ರಮ ಅದ್ದೂರಿಯಾಗಿ ದಿನಾಂಕ 26 ಅಕ್ಟೋಬರ್ 2025ರಂದು ಮಂಗಳೂರಿನ ಹೊರವಲಯದ ದೇರಳಕಟ್ಟೆಯಲ್ಲಿರುವ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ದಿನಪೂರ್ತಿ ನಡೆದು ಸಂಪನ್ನವಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ವಿದ್ಯಾರತ್ನ ಸಂಸ್ಥೆಯ ಸ್ಥಾಪಕರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು, ಯುಗಪುರುಷ ಮಾಸಿಕದ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ, ಸಿನಿಮಾ ನಟ ಮತ್ತು ನಿರ್ಮಾಪಕರಾದ ಸತೀಶ್ ಎನ್. ಬಂಗೇರ, ಡಾ. ದೇವಪ್ಪ ಇವರು ಅತಿಥಿಗಳಾಗಿ ಭಾಗವಹಿಸಿದರು.
ಪೂರ್ವಾಹ್ನ 10-00 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ಅನಿತಾ ಶೆಣೈ, ಸುಲೋಚನಾ ನವೀನ್, ಸುಭಾಷಿಣಿ ಮತ್ತು ರೇಖಾ ಸುದೇಶ್ ಇವರ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಕಾದಂಬರಿಗಾರರಾದ ಪಿ.ವಿ. ಪ್ರದೀಪ್ ಕುಮಾರ್ ಇವರು ಪ್ರಸ್ತಾವನೆ ಮಾಡಿದರು. ಈ ಸಂದರ್ಭದಲ್ಲಿ 17 ಪುಸ್ತಕಗಳು ಲೋಕಾರ್ಪಣೆಗೊಂಡವು. ಶಿಕ್ಷಕರಾದ ವಿದ್ವಾಂಸ ಶ್ರೀ ವಿ.ಬಿ. ಕುಳಮರ್ವ ಕೃತಿ ಬಿಡುಗಡೆ ಮಾಡಿ ಕೃತಿಕಾರರಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ. ಸತ್ಯವತಿ ಎಸ್. ಭಟ್, ತಾರಸಿ ಕೃಷಿ ವಿಶೇಷ ತಜ್ಞ ಡಾ. ಪಡೆಂಬೈಲು ಕೃಷ್ಣಪ್ಪ ಗೌಡ, ಸಿನಿಮಾ ನಟ ಮತ್ತು ನಿರ್ಮಾಪಕ ಡಾ ಸತೀಶ್ ಎನ್. ಬಂಗೇರ, ಸಾಹಿತ್ಯ ಪರಿಚಾರಕ ಡಾ. ಕೊಳ್ಳಪ್ಪೆ ಗೋವಿಂದ ಭಟ್ ಉಪಸ್ಥಿತರಿದ್ದರು. ಈ ವೇದಿಕೆಯಲ್ಲಿ ಚೈತನ್ಯಶ್ರೀ ರಾಜ್ಯ ಪ್ರಶಸ್ತಿಯನ್ನು ಡಾ. ಬಿ.ಎ. ಪಾಲಾಕ್ಷ ಇವರು ಪಡೆದರು. ಕಥಾ ಬಿಂದು ಪ್ರಕಾಶನದಲ್ಲಿ ಪ್ರಕಟವಾದ ‘ಬಾಲ ಮಂದಾರ’ ಕೃತಿಗೆ ಸಾಹಿತ್ಯ ಅಕಾಡೆಮಿ (2023) ಕೊಡ ಮಾಡುವ ‘ಸೊಗಸು’ ಪ್ರಶಸ್ತಿಗೆ ಭಾಜನರಾದ ಪರ್ವೀನಾ ಬಾನು ಎನ್. ಶೇಖ ಇವರನ್ನು ಸನ್ಮಾನಿಸಲಾಯಿತು.
ಸಾಧಕರಾದ ಶ್ರೀ ಸತೀಶ್ ಶೆಟ್ಟಿ (ಸಮಾಜ ಸೇವ ರತ್ನ), ಶ್ರೀ ಆರ್.ಎಂ. ಗೋಗೇರಿ (ಸೌರಭರತ್ನ), ಡಾ. ಲಕ್ಷ್ಮಿಕಾಂತ ಕೆ.ಎಸ್. (ಶಿಕ್ಷಣ ರತ್ನ), ಕುಮಾರ್ ಆರ್ವ. ಶೆಟ್ಟಿ (ಸೌರಭರತ್ನ), ಶ್ರೀ ನಾಗರಾಜ ಭಟ್ (ಸೌರಭರತ್ನ), ಡಾ. ಶಶಿಕಿರಣ್ ಶೆಟ್ಟಿ (ಸಮಾಜ ಸೇವಾ ರತ್ನ), ಶ್ರೀಮತಿ ಕವಿತಾ ಗೋಪಾಲ್ (ಸಮಾಜ ಸೇವ ರತ್ನ), ಶ್ರೀಮತಿ ಶೈಲಾ ಚೆಲುವಯ್ಯ (ಸೌರಭರತ್ನ), ಶ್ರೀಮತಿ ಅಣ್ಣಮ್ಮ (ಸೌರಭರತ್ನ), ಪೂರ್ಣಿಮಾ ಗುರುಮೂರ್ತಿ (ಸೌರಭರತ್ನ), ಶೈಲಾ ಬಸವರಾಜ್ (ಶಿಕ್ಷಣ ರತ್ನ), ಕೇಶವ ಶಕ್ತಿನಗರ (ಯಕ್ಷಗಾನ ಶ್ರೀ) ಮತ್ತು ಎ. ವಿಜಯಕುಮಾರ್ (ಗಾಯನ ಶ್ರೀ) ರಾಜ್ಯ ಪ್ರಶಸ್ತಿ ಸ್ವೀಕರಿಸಿದರು. ಸಾಮಾಜಿಕ ಕಾರ್ಯಕರ್ತೆ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗೆ ಭಾಜನರಾದ ಡಾ. ಪ್ರತಿಭಾ ಸಾಲಿಯಾನ್ ಇವರಿಗೆ ಗೌರವ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ 32 ಹಿರಿಯ ಶಿಕ್ಷಕ-ಶಿಕ್ಷಕಿಯರಿಗೆ ‘ಶಿಕ್ಷಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತದನಂತರ ಶ್ರೀಮತಿ ಪುಷ್ಪ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸುಮಾರು 20 ಕವಿಗಳು ಕವನ ವಾಚಿಸಿದರು. ಕಾರ್ಯಕ್ರಮವನ್ನು ಲೇಖಕಿ ಲಕ್ಷ್ಮೀ ವಿ. ಭಟ್, ಆಕಾಶವಾಣಿ ಉದ್ವೇಷಕಿ ಸುಲೋಚನಾ ನವೀನ್, ಕವಯತ್ರಿ ವಿದ್ಯಾ ಅಡೂರ್, ಕವಯತ್ರಿ ವಿಂದ್ಯಾ ಎಸ್. ರೈ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಲಕ್ಷ್ಮಿ ತೆರೆದಮಠ ಇವರ ನೇತೃತ್ವದಲ್ಲಿ ನಾಟ್ಯಕಲಾ ಅಕಾಡಮಿ, ವಿಜಯಪುರ ಆಶಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕಾಸರಗೋಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಡಾ. ವಾಣಿಶ್ರೀ ಇವರ ನೇತೃತ್ವದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ ಮತ್ತು ಗಡಿನಾಡ ಜಾನಪದ ಮಹಿಳಾ ತಂಡ ಇವರಿಂದ ಕನ್ನಡಿಗ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
