ಸವದತ್ತಿ : ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ‘ಸಹೃದಯ ಕಾವ್ಯ ಪ್ರಶಸ್ತಿ’ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭವು ಸವದತ್ತಿಯ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ ದಿನಾಂಕ 16-06-2024ರ ಭಾನುವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಮರ್ಶಕ ಡಾ. ಎಚ್. ಎಸ್. ಸತ್ಯನಾರಾಯಣ ಮಾತನಾಡಿ “ಶಕ್ತಿ ದೇವತೆಯ ನೆಲದಲ್ಲಿ ಇಂದು ಕಾವ್ಯಶಕ್ತಿಯ ಆರಾಧನೆ ನಡೆದಿದೆ. ಪ್ರಶಸ್ತಿಗಳು ಹೊತ್ತು ತಿರುಗಲು ಅಲ್ಲ ಬದಲಾಗಿ ಸಾಹಿತ್ಯ ಸೇರಿ ಆಯಾ ರಂಗದಲ್ಲಿ ಸಾಧಿಸಿದ ಸ್ಫೂರ್ತಿಗೆ ಮತ್ತಷ್ಟು ಹೊಳಪು ನೀಡುವುದಾಗಿದೆ. ನಾಲ್ಕು ದಿಕ್ಕುಗಳಿಂದ ಪ್ರತಿಭಾವಂತ ಕವಿಗಳನ್ನು ಬರುವಂತೆ ಮಾಡಿರುವ ಕಾರ್ಯ ಶ್ಲಾಘನೀಯ. ಕಾವ್ಯ ಎನ್ನುವುದು ನಮ್ಮನ್ನೆಲ್ಲ ಹಿಡಿದಿಡುವ ಸಮ್ಮೋಹನ ಶಕ್ತಿ. ಪ್ರಶಸ್ತಿ ಎನ್ನುವುದು ಇಂದು ಉದ್ಯಮವಾಗಿರುವ ಸಂದರ್ಭದಲ್ಲಿ ಪ್ರಾಮಾಣಿಕತೆ ಮೆರೆದು ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸ ತಂದಿದೆ. ಅದಮ್ಯ ಕಾವ್ಯ ಪ್ರೀತಿಯ ನಾಗೇಶ್ ಜೆ. ನಾಯಕ ಇವರು ಕವಿ ಪೂಜೆ ನಡೆಸಿಲ್ಲ. ಬದಲಾಗಿ ಕಾವ್ಯಪೂಜೆ ಮಾಡುತ್ತಿದ್ದಾರೆ. ಪುಟ್ಟ ಪ್ರಶಸ್ತಿಗಳ ಹಿಂದೆ ಅಲ್ಪವೂ ದುರುದ್ದೇಶವಿಲ್ಲ ನಿರ್ಮಲ ಮನಸ್ಸಿನಿಂದ ನೀಡುತ್ತಿರುವ ಈ ಪ್ರಶಸ್ತಿ ಚಿರಕಾಲ ಉಳಿದು ಮತ್ತೆ ಪ್ರೇರಣೆಗೆ ಸಿದ್ಧವಿರಲಿ.ಕೃತಿಯ ಆಯ್ಕೆ ಕಷ್ಟಕರವಾಗಿದ್ದರೂ ತೀರ್ಪುಗಾರ ಚನ್ನಪ್ಪ ಅಂಗಡಿಯವರು ಅತ್ಯುತ್ತಮ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಅದಕ್ಕೆ ಈ ಸಂಕಲನಗಳಿಗೆ ಬೇರೆ ಬೇರೆ ಪ್ರಶಸ್ತಿಗಳು ಸಿಕ್ಕಿರುವುದೇ ಸಾಕ್ಷಿ.” ಎಂದರು.
ಕಸಾಪ ಅಧ್ಯಕ್ಷ ಡಾ. ವೈ. ಎಂ. ಯಾಕೊಳ್ಳಿ ಮಾತನಾಡಿ “ಸವದತ್ತಿಯ ನೆಲದಲ್ಲಿ ನಾಗೇಶ್ ನಾಯಕ ಹುಟ್ಟು ಹಾಕಿದ ಸಹೃದಯ ಸಾಹಿತ್ಯ ಪ್ರತಿಷ್ಠಾನ ನಾಡಿನುದ್ದಗಲಕ್ಕೂ ಪಸರಿಸಿದೆ ಎನ್ನುವದಕ್ಕೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿ ಪ್ರಶಸ್ತಿ ಪಡೆದುಕೊಳ್ಳುತ್ತಿರುವ ನಾಲ್ಕು ಜನ ಕವಿಗಳೇ ಉದಾಹರಣೆ. ಕಾವ್ಯಕ್ಕಾಗಿಯೇ ಮೀಸಲಾಗಿರಿಸಿದ ಈ ಪುರಸ್ಕಾರ ಯುವಪ್ರತಿಭೆಗಳನ್ನು ನೀರೆರೆದು ಪೋಷಿಸುವ ಕಾರ್ಯ ಮಾಡುತ್ತಿದೆ.” ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕಾತ್ಯಾಯನಿ ಕುಂಜಿಬೆಟ್ಟು, ಡಾ. ಲಕ್ಷ್ಮಣ ವಿ. ಎ., ಎಸ್. ಕೆ. ಮಂಜುನಾಥ್ ಹಾಗೂ ಸಮಿತ್ ಮೇತ್ರಿ ಇವರಿಗೆ ‘ಸಹೃದಯ ಕಾವ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ‘ಸಹೃದಯ ಕಾವ್ಯ ಪ್ರಶಸ್ತಿ’ ಪ್ರದಾನ ಹಾಗೂ ಕವಿಗೋಷ್ಠಿ
No Comments1 Min Read
Previous Articleರಂಗಕರ್ಮಿ ನ. ರತ್ನ ನಿಧನ
Next Article ಅರೆಹೊಳೆಯಲ್ಲಿ ಉದ್ಘಾಟಣೆಗೊಂಡ ಆರ್ಟ್ ಗ್ಯಾಲರಿ