Subscribe to Updates

    Get the latest creative news from FooBar about art, design and business.

    What's Hot

    ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01

    January 31, 2026

    ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ‘ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನ’

    January 31, 2026

    ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    January 31, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01
    Awards

    ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01

    January 31, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಅರವತ್ತ್ ಬೇಕಲ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಕರ್ನಾಟಕ ಜಾನಪದ ಪರಿಷತ್ತು ಯುಎಇ ಮತ್ತು ಒಮಾನ್ ಘಟಕದ ಸಹಕಾರದಲ್ಲಿ ದಿನಾಂಕ 01 ಫೆಬ್ರುವರಿ 2026ರಂದು ಬೆಳಗ್ಗೆ 9-00 ಗಂಟೆಗೆ ಬೇಕಲ ಅರವತ್ತ್ ಆಂಫಿಥಿಯೇಟರ್ಸ್ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ ನಡೆಯಲಿದೆ.

    ಬೆಳಗ್ಗೆ 9-00ಕ್ಕೆ ಮುದಿಯಕ್ಕಲ್‌ನಿಂದ ಟ್ರಸ್ಟ್ ಕಚೇರಿವರೆಗೆ ಸಾಂಸ್ಕೃತಿಕ ಮೆರವಣಿಗೆ, 9.30ಕ್ಕೆ ಚೆಂಡೆಮೇಳ, 10ರಿಂದ ಕಥಕ್ಕಳಿ –ಯಕ್ಷಗಾನ ಪ್ರದರ್ಶನ ನಡೆಯಲಿದೆ. 10.30ಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕರ್ನಾಟಕ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಉದ್ಘಾಟಿಸುವರು. ಕೇರಳ ಮ್ಯೂಸಿಯಂ ಮತ್ತು ಪುರಾತತ್ವ ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಪ್ರಶಸ್ತಿ ಪ್ರದಾನ ಮಾಡುವರು.

    ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಅಧ್ಯಕ್ಷ ಪ್ರೊ. ಹಿ.ಟಿ. ಬೋರಲಿಂಗಯ್ಯ, ಗ.ಸಾ.ಸಾ.ಅ.ಪ್ರಾ. ಕಾಸರಗೋಡು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕೆ.ಆರ್.ಎಸ್.ಎಂ. ಕೇರಳ ಅಧ್ಯಕ್ಷ ರಾಘವ ಚೇರಾಲ್, ಕ.ಜಾ.ಪ ಕೇರಳ ಘಟಕ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್‌. ನಾಸಿ, ಮಂಗಳೂರು ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಯುಎಇ ಘಟಕದ ಅಧ್ಯಕ್ಷ ಸದನ್ ದಾಸ್ ಶಿರೂರು, ಒಮಾನ್ ಘಟಕದ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ ಅತಿಥಿಗಳಾಗಿ ಭಾಗವಹಿಸುವರು.

    ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸದಸ್ಯ ಎ.ಆರ್ಯ. ಸುಬ್ಬಯಕಟ್ಟೆ, ಟ್ರಸ್ಟ್ ಅಧ್ಯಕ್ಷ ಡಾ. ಎ.ಎಂ ಶ್ರೀಧರನ್, ಸ್ವಾಗತ ಸಮಿತಿ ಅಧ್ಯಕ್ಷ ಪಿ. ಭಾಸ್ಕರನ್, ರವಿ ನಾಯ್ಕಾಪು, ಮಾಧುರಿ ಎಸ್.ಬೋಸ್ ಉಪಸ್ಥಿತರಿರುವರು. ಸಂಜೆ 5-30ಕ್ಕೆ ಆರಂಭವಾಗುವ ವಾರ್ಷಿಕ ಸಂಸ್ಮರಣಾ ಸಮಾರಂಭವನ್ನು ಉದುಮ ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸುವರು. ಕೇರಳ ಕೇಂದ್ರೀಯ ವಿವಿಯ ಮಲಯಾಳಂ ವಿಭಾಗ ಮುಖ್ಯಸ್ಥ ಡಾ. ಚಂದ್ರಬೋಸ್ ಆರ್. ಸಂಸ್ಮರಣಾ ಭಾಷಣ ಮಾಡುವರು. ಸಿನಿಮಾ ಧಾರವಾಹಿ ಕಲಾವಿದ ಉಣ್ಣಿರಾಜ್, ಕಾಞಂಗಾಡ್ ಬ್ಲಾಕ್ ಪಂ. ಅಧ್ಯಕ್ಷೆ ಕೆ. ಸುಜಾತ, ಪಳ್ಳಿಕ್ಕೆರೆ ಗ್ರಾಪಂ ಅಧ್ಯಕ್ಷೆ ಟಿ. ಶೋಭನಾ, ಉದುಮ ಗ್ರಾ.ಪಂ. ಅಧ್ಯಕ್ಷ ಪಿ.ವಿ. ರಾಜೇಂದ್ರನ್, ಟ್ರಸ್ಟ್ ಕಾರ್ಯದರ್ಶಿ ಉದಯಭಾನು, ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಮತ್ತಿತರರು ಉಪಸ್ಥಿತರಿರುವರು.

    ಕಾರ್ಯಕ್ರಮದಲ್ಲಿ ಶಿವಾನಂದ ಕೋಟ್ಯಾನ್ ಕಟಪಾಡಿ ಅವರ ‘ನಂಟು’ (ಕನ್ನಡ), ಡಾ. ಜಯರಾಜನ್ ಕಾನಾಡ್ ಅವರ ‘ಬರವುದ ಸಾದಿ’ (ಮಲಯಾಳಂ) ಹಾಗೂ ಮುನೀರ ಎ. ಅವರ ‘ಹೃದಯ ರಾಗ’ (ಕನ್ನಡ) ಪುಸ್ತಕ ಬಿಡುಗಡೆ ಮಾಡಲಾಗುವುದು. ಕೇರಳ ಮತ್ತು ಕರ್ನಾಟಕದ ನಡುವಿನ ಸಾಂಸ್ಕೃತಿಕ ಸಾಮರಸ್ಯವನ್ನು ಸಂಕೇತಿಸುವ ಈ ಉತ್ತವದಲ್ಲಿ ಚೆಂಡೆ ಮೇಳದೊಂದಿಗೆ ವರ್ಣರಂಜಿತ ಮೆರವಣಿಗೆ ಪೂರಕ್ಕಳ, ಕೋಲ್ಕಳಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೀರಗಾಸೆ, ನಾಸಿಕ್ ಡೋಳು, ಜಾನಪದ ನೃತ್ಯ, ಸಮೂಹ ನೃತ್ಯ ಇತರ ಸಾಂಪ್ರದಾಯಿಕ ಮತ್ತು ಜಾನಪದ ಕಲಾ ಪ್ರಕಾರಗಳು, ಶ್ರೀಮಂತ ಜಾನಪದ ಮತ್ತು ಶಾಸ್ತ್ರೀಯ ಪ್ರದರ್ಶನ, ಕೈಕೊಟ್ಟುಕಳಿ, ದಫ್ ಮುಟ್ಸ್ ಮಂಗಳಂಕಳಿ ಅಲಾಮಿಕಳಿ ಇರುಳ ನೃತ್ಥಂ ಯಕ್ಷಗಾನ, ಕಥಕ್ಕಳಿ, ಪೂಜಾಕುಣಿತ ರಾತ್ರಿ 7ರಿಂದ ಗದಾಯುದ್ಧ ಯಕ್ಷಗಾನ, 8ರಿಂದ ‘ಲವಣಾಸುರವಧಮ್’ ಕಥಕ್ಕಳಿ ಪ್ರದರ್ಶನ ನಡೆಯಲಿದೆ.

    ಬೋರ್ಗ್ ರೋಲ್ಡ್ ವಾರ್ನರ್ ಸಂಸ್ಥಾಪಕ ನಜೀರ್ ವೆಲಿಯಿಲ್ ಮತ್ತು ಕಲಾಪೋಷಕ ಡಾ. ಮಣಿಕಂಠನ್ ಮೇಲೋಟ್ ಅವರಿಗೆ ಭಾವ ಭಾರತಿ ಪುರಸ್ಕಾರ, ಕಥಕ್ಕಳಿ ಕಲಾವಿದ ಕೋಟಕ್ಕಲ್ ದೇವದಾಸನ್ ಅವರಿಗೆ ನಾಟ್ಯಾಚಾರ್ಯ ಪುರಸ್ಕಾರ, ಡಾ. ವಾದ್ಯ ಪ್ರವೀಣ್ ಚಿರುತಾಝಂ ಕುಂಞು ರಾಮನ್ ಮಾರಾ‌ರ್ ಅವರಿಗೆ ಪ್ರತಿಭಾ ಪುರಸ್ಕಾರ (ಚೆಂಡೆ), ಕೋಟಕ್ಕಲ್ ರಮೇಶನ್ ಮಾರಾರ್ ಗೆ ಪ್ರತಿಭಾ ಪುರಸ್ಕಾರ (ಚೆಂಡೆ), ಕೋಡೋತ್ ತರವಾಡಿಗೆ ದೇಸಿ ಪುರಸ್ಕಾರ, ಕಲಾಪೋಷಕ ಪ್ರಕಾಶ್ ಕುಂಪಲ ಅವರಿಗೆ ಸಮಾಜರತ್ನ ಪ್ರಶಸ್ತಿ ಜಾನಪದ ಕಲಾಪೋಷಕ ಜೋಸೆಫ್ ಮಥಾಯಸ್ ದುಬೈ ಮತ್ತು ಅಂಕಣಕಾರ, ಜಾನಪದ ಕಲಾ ಪೋಷಕರು ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಜಾನಪದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಥಕ್ಕಳಿ, ಯಕ್ಷಗಾನ ಮತ್ತು ಜಾನಪದ ಕಲೆ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಕೋಟಕಲ್ ಉಣ್ಣಿಕೃಷ್ಣನ್ ಮತ್ತು ಜಯರಾಮ ಪಾಟಾಳಿ ಪಡುಮಲೆ ಪ್ರಸ್ತುತಪಡಿಸುವರು.

    award baikady Book release dance felicitation folk kathak Literature Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕುಂದಾಪುರದ ಸರಕಾರಿ ಕಾಲೇಜಿನಲ್ಲಿ ‘ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನ’
    roovari

    Add Comment Cancel Reply


    Related Posts

    ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ‘ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನ’

    January 31, 2026

    ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    January 31, 2026

    ಸಾಗರದಲ್ಲಿ ಮನೆಯಂಗಳದಿ ಜಾನಪದ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮ | ಫೆಬ್ರುವರಿ 01

    January 31, 2026

    ಮಂಗಳೂರಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ‘ಕನ್ನಡದ ಕಂಪು ಸರಣಿ -7’ | ಫೆಬ್ರುವರಿ 08 

    January 31, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.