22 ಮಾರ್ಚ್ 2023, ಮಂಗಳೂರು: ಇದೇ ಬರುವ ತಾರೀಕು 26-03-2023ರ ಬೆಳಿಗ್ಗೆ ಗಂಟೆ 10ಕ್ಕೆ ಮಂಗಳೂರು ರಥ ಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ “ವಿಶ್ವಕರ್ಮ ಕಲಾ ಪರಿಷತ್” ಇದರ ಉದ್ಘಾಟನಾ ಸಮಾರಂಭ ಹಾಗೂ “ಸಮರ್ಪಣಂ” – ವಿಶ್ವಕರ್ಮ ಕಲೋತ್ಸವ ನಡೆಯಲಿದೆ ಎಂದು ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಪಿ.ಗುರುದಾಸ್ ತಿಳಿಸಿದರು.
ಶ್ರೀಮದ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ವಿಶ್ವಕರ್ಮ ಕಲಾ ಪರಿಷತ್ತನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕೆ. ಕೇಶವ ಆಚಾರ್ಯ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ್ ಇವರು ವಿಶ್ವಕರ್ಮ ಕಲೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಗೌರವ ಸನ್ಮಾನ: ಶ್ರೀ ಕ್ಷೇತ್ರದಲ್ಲಿ ಕಲಾ ಪೋಷಕರಾಗಿ ಸೇವೆ ಸಲ್ಲಿಸಿದ ಸ್ವರ್ಣ ಶಿಲ್ಪಿಗಳಾದ ಪಿ. ಶಿವರಾಮ ಆಚಾರ್ಯ ಕಂಕನಾಡಿ, ಮುನಿಯಾಲ್ ದಾಮೋದರ ಆಚಾರ್ಯ, ಪೈಯಾಲ್ ಭಾಸ್ಕರ ಆಚಾರ್ಯ, ಹಿರಿಯ ಕಲಾ ಪೋಷಕರಾದ ಶಕುಂತಳಾ ಬಿ. ರಾವ್, ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಯೋಗೀಶ್ ಬೋಳೂರು ಅವರನ್ನು ಗೌರವಿಸಲಾಗುವುದು.
ಇದೇ ವೇಳೆ ಪ್ರಮುಖರಾದ ಎ. ಲೋಕೇಶ್ ಆಚಾರ್ಯ, ಪಿ.ಎನ್. ಆಚಾರ್ಯ, ಅಲೆವೂರು ಯೋಗೀಶ ಆಚಾರ್ಯ, ಕೆ.ಸತೀಶ ಆಚಾರ್ಯ ಕಾರ್ಕಳ, ದಿನೇಶ್ ಟಿ. ಶಕ್ತಿನಗರ, ಪ್ರೊ. ಜಿ.ಯಶವಂತ ಆಚಾರ್ಯ ಅವರು ಉಪಸ್ಥಿತರಿರುವರು ಎಂದು ಹೇಳಿದರು.
ಬೆಳಗ್ಗೆ 10ರಿಂದ 4ಗಂಟೆಯವರೆಗೆ ಶಿಲ್ಪಿಗಳ ವೈವಿಧ್ಯಮಯ, ವಿವಿಧ ಶೈಲಿಗಳ ವಿವಿಧ ಪ್ರಕಾರಗಳ ಕಲಾಕೃತಿಗಳ ಪ್ರದರ್ಶನ, ಒಂದೇ ಹಾಡಿಗೆ ಐವರು ಕಲಾವಿದರಿಂದ ಏಕಕಾಲದಲ್ಲಿ ಕಲಾಕೃತಿಗಳ ರಚನೆ, ಕಾವ್ಯಕುಂಚ, ನೃತ್ಯಕುಂಚ ಸೇರಿದಂತೆ ವಿಭಿನ್ನ ರಂಗಪ್ರದರ್ಶನಗಳ ಮೂಲಕ ವಿಶ್ವಬ್ರಾಹ್ಮಣ ಕಲಾ ಪ್ರತಿಭೆಗಳ ಅನಾವರಣ ನಡೆಯಲಿದೆ.
ವಿಶ್ವ ಬ್ರಾಹ್ಮಣ ಸಮಾಜದವರಿಗೆ ಆರ್ಟಿಸನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಲಾಗಿದೆ. ಮಧ್ಯಾಹ್ನ 3.45ಕ್ಕೆ ವಿಶ್ವಕರ್ಮ ಕಲೋತ್ಸವ ಸಮಾರೋಪ, ಕಲಾವಿದರಿಗೆ ಪ್ರಮಾಣ ಪತ್ರ ವಿತರಣೆ ನಡೆಯಲಿದೆ ಎಂದು ವಿವರಿಸಿದರು.
ಪರಿಷತ್ ನ ಪ್ರಮುಖರಾದ ಪಿ.ಎನ್. ಆಚಾರ್ಯ, ಎ.ಜಿ. ಸದಾಶಿವ, ರತ್ನಾವತಿ ಜೆ.ಬೈಕಾಡಿ, ರಮ್ಯಾ ಲಕ್ಷ್ಮೀಶ ಆಚಾರ್ಯ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಮಂಗಳೂರು ವಿ.ವಿ.ಯಲ್ಲಿ ಪ್ರಶಸ್ತಿ ಪ್ರದಾನ ಮತ್ತು ಕೃತಿ ಬಿಡುಗಡೆ