06 ಏಪ್ರಿಲ್ 2023, ಪುತ್ತೂರು: ಸನಾತನ ಸಂಪ್ರದಾಯದಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀರಾಮನು ಅಯೋಧ್ಯೆಯಲ್ಲಿ ಜನಿಸಿದನು ಎಂಬುದು ಹಿಂದೂ ಧರ್ಮದ ನಂಬಿಕೆ. ಈ ದಿನ ಶ್ರೀರಾಮನಿಗೆ ವಿಶೇಷವಾದ ಪೂಜೆ ಮತ್ತು ವೃತಗಳು ನಡೆಯುತ್ತವೆ.
ರಾಮನವಮಿಯಂದು ವಿಶೇಷವಾಗಿ ದ್ವಾರಕ ಪ್ರತಿಷ್ಠಾನದ ವತಿಯಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಪತ್ನಿ ವಿದುಷಿ ಪ್ರೀತಿಕಲಾ ಅವರಿಂದ “ಸಂಪೂರ್ಣ ರಾಮಾಯಣ” ನೃತ್ಯ ರೂಪಕ ಕಾರ್ಯಕ್ರಮ ಮುಕ್ರಂಪಾಡಿ ಗೋಕುಲ ಬಡಾವಣೆಯ ‘ನಂದಗೋಕುಲ’ ವೇದಿಕೆಯಲ್ಲಿ ದಿನಾಂಕ 30-03-2023ರಂದು ನಡೆಯಿತು.
ದ್ವಾರಕ ಪ್ರತಿಷ್ಠಾನದ ಶ್ರೀ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಗೋಪಾಲಕೃಷ್ಣ ಭಟ್ ಇವರ ಮಾತೃಶ್ರೀ ಹಿರಿಯರಾದ ಲಕ್ಷ್ಮೀಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಷ್ಠಾನದಿಂದ ಅದ್ವಿತ್ ಕಲ್ಲೂರಾಯ ರಾಮನವಮಿಯ ಕುರಿತು ಮಾತನಾಡಿದರು. ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಹಿರಿಯ ವಿದ್ಯಾರ್ಥಿನಿ ಅಪೂರ್ವ ಗೌರಿ ನೃತ್ಯ ಗುರುಗಳನ್ನು ಪರಿಚಯಿಸಿದರು. ಡಾ. ಸದಾಶಿವ ಭಟ್ ಪೆರ್ಲ ಮತ್ತು ಡಾ.ಪ್ರತಿಭಾ ಕಲ್ಲೂರಾಯ ನೃತ್ಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಇವರನ್ನು ಗೌರವಿಸಿದರು. ಆಗಮಿಸಿದವರೆಲ್ಲರನ್ನು ಅವನೀಶ ಕೃಷ್ಣ ಸ್ವಾಗತಿಸಿದರು.
ಬಳಿಕ ನೃತ್ಯ ರೂಪಕದಲ್ಲಿ ವಿವಿಧ ಹಸ್ತಮುದ್ರೆಯ ಮೂಲಕ ರಾಮಾಯಣದ ಪಾತ್ರದಲ್ಲಿ ಬರುವವರನ್ನು ತೋರಿಸಿದರು. ದಶರಥ ಮಹಾರಾಜ ಪತ್ನಿಯರ ಜೊತೆ ಮಾಡಿದ ಯಜ್ಞ, ಸೀತಾ ಕಲ್ಯಾಣ, ಪಟ್ಟಾಭಿಷೇಕದ ಕಥೆ, ವನವಾಸ, ಸೀತಾ ಅಪಹರಣ, ಅಶೋಕವನ, ರಾವಣ ಸಂಹಾರ, ಸೀತೆಯ ಅಗ್ನಿಪರೀಕ್ಷೆ ನೃತ್ಯರೂಪಕದಲ್ಲಿ ಪ್ರಸ್ತುತ ಪಡಿಸಲಾಯಿತು.
2 Comments
Wonderful
Pleasure to watch sampoorna ramayana and all our kids enjoyed the most 👏👏👏🙏
Excellent work💪