20 ಫೆಬ್ರವರಿ 2023, ಮಂಗಳೂರು: “ಗುರವರ”ದಲ್ಲಿ ಸಂಸ್ಕಾರ ಭಾರತಿ ಮಂಗಳೂರು ವತಿಯಿಂದ “ಭರತ ಮುನಿ ಸ್ಮೃತಿ ದಿವಸ”ವನ್ನು ದಿನಾಂಕ 19-02-2023ನೇ ಭಾನುವಾರ ಸಂಜೆ 6-30 ಗಂಟೆಗೆ ಆಚರಿಸಲಾಯಿತು.
ವಿದುಷಿ ರೂಪಶ್ರೀ ಮಧುಸೂದನ್ ನಿರ್ದೇಶಕರು ನೃತ್ಯಾಂಗನ ಪ್ರದರ್ಶನ ಕೇಂದ್ರ, ನಾಗರಬಾವಿ, ಬೆಂಗಳೂರು ಇವರು ಭರತಮುನಿಗೆ ನುಡಿನಮನ ಸಲ್ಲಿಸುತ್ತಾ “ಭಾರತ ಮಾತೆಯನ್ನು ವೈಭವೀಕರಿಸಿದ ಮುನಿಪುಂಗವ ಭರತ ಮುನಿಗಳು” ಎಂದರು. ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್ ಇಲ್ಲಿಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ್ ನಾವಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತದ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಇವರು ಮಾತನಾಡಿ “ಮನಸ್ಸನ್ನು ಕೆರಳಿಸುವ ನೃತ್ಯದಲ್ಲಿ ಮಕ್ಕಳನ್ನು ತೊಡಗಿಸದೆ, ಸಂಸ್ಕಾರ ಉಳಿಸುವ ಬೆಳೆಸುವ ಲಲಿತ ಕಲೆಗಳ ಕಡೆಗೆ ಮಕ್ಕಳ ಒಲವು ಹರಿಯುವಂತೆ ಮಾಡಿ” ಎಂದು ಕಿವಿಮಾತು ಹೇಳಿದರು. ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಕೆ. ಭಂಡಾರಿ ಸ್ವಾಗತಿಸಿ ಮಾಧವ ಭಂಡಾರಿ ವಂದಿಸಿದರು.
ಸಭಾ ಕಾರ್ಯಕ್ರಮದ ಕೊನಯಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಶಿಷ್ಯ ವೃಂದದಿಂದ ನೃತ್ಯ ನಮನ ಕಾರ್ಯಕ್ರಮ ನಡೆಯಿತು. ವಿದುಷಿ ಶ್ರೀಲತಾ ನಾಗರಾಜ್ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Previous Articleಜನತೆಯ ಕವಿ ಸರ್ವಜ್ಞ