ಮಂಗಳೂರು : ಸದ್ಗುರು ಸಂಗೀತ ಪಾಠಶಾಲಾ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮವು ದಿನಾಂಕ 15-08-2023ರಂದು ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಸಭಾ ಸದನ ಕರಂಗಲ್ಪಾಡಿ ಇದರ ಅಧ್ಯಕ್ಷರಾದ ಶ್ರೀ ಹರ್ಷ ಕುಮಾರ್ ಕೇದಿಗೆ ಅವರು ಉದ್ಘಾಟಿಸಿ ಮಾತನಾಡುತ್ತಾ “ಭಾರತೀಯ ಸನಾತನ ಸಂಸ್ಕೃತಿಯ ಎಲ್ಲಾ ಕಲೆಗಳಲ್ಲೂ ಎಲ್ಲರನ್ನೂ ರಮಿಸುವ ಕಲೆಯೆಂದರೆ ಸಂಗೀತ ಎಂದು ನುಡಿದರು. ಸಂಗೀತಕ್ಕೆ ವಿಶೇಷವಾದ ಶಕ್ತಿ ಇದೆ, ಕಲಿಯುಗದಲ್ಲಿ ಭಗವಂತನ ಸಾಕ್ಷಾತ್ಕಾರ ಪಡೆಯುವುದಕ್ಕೆ ಯೋಗ ತಪಸ್ಸು ಜ್ಞಾನ ಮತ್ತು ಭಕ್ತಿ ಇವೇ ಮೊದಲಾದ ಮಾರ್ಗಗಳಿದ್ದರೂ ನಾದ ರೂಪನಾಗಿರುವ ಪರಮಾತ್ಮನನ್ನು ನಾದ ರೂಪದಿಂದಲೇ ಒಲಿಸಿಕೊಳ್ಳಲು ಸುಲಭ ಸಾಧನವೇ ಸಂಗೀತ” ಎಂದು ಹೇಳಿದರು.
ಕಲಾಶ್ರೀ ವಿದುಷಿ ಕಮಲ ಭಟ್, ವಿದುಷಿ ವಿನಯ ರಾವ್, ಮೃದಂಗ ವಿದ್ವಾಂಸ ಮನೋಹರ ರಾವ್, ಶರ್ಮಿಳಾ ರಾವ್, ಪೋಷಕರಾದ ವಿಶ್ವೇಶ್ವರ ಭಟ್, ಕೆ.ಎಂ.ಸಿ.ಯ ವೈದ್ಯರಾದ ಡಾ. ದೇವಿ ಪ್ರಸಾದ್, ಸಂಸ್ಕೃತ ಉಪನ್ಯಾಸಕ ವೆಂಕಟ್ರಮಣ ಪೈ ಮೊದಲಾದವರು ಉಪಸ್ಥಿತರಿದ್ದರು. ಶೈಲಜಾ ಶಿವಶಂಕರ್ ಕಾರ್ಯಕ್ರಮ ನಿರೂಪಿಸಿ. ಪಾಠಶಾಲೆಯ ನಿರ್ದೇಶಕ ನಾದಶ್ರಿ ವಿದ್ವಾನ್ ಗಣೇಶ್ ರಾಜ್ ಸ್ವಾಗತಿಸಿ ಪ್ರಸ್ತಾವಿಸಿದರು. ಕೊನೆಯಲ್ಲಿ ಆಹ್ವಾನಿತ ಕಲಾವಿದರುಗಳಿಂದ ಸಂಗೀತ ಸೌರಭ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಭಾವ ಗೀತೆ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಜರುಗಿದವು.