ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ‘ಸನಾತನ ಗುರು ಪರಂಪರ’ ಕಾರ್ಯಕ್ರಮವು ದಿನಾಂಕ 20-07-2024ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಲಿದೆ.
ಧಾರ್ಮಿಕ ಚಿಂತಕರಾದ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ಇವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಸಮೂಹದ ರಂಗ ನಿರ್ದೇಶಕರು, ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಕೀರ್ತಿಶೇಷ ಪ್ರೊ. ಉದ್ಯಾವರ ಮಾಧವ ಆಚಾರ್ಯ ಇವರ ‘ಗುರುಸಂಸ್ಮರಣೆ’, ಹಿರಿಯ ಕಲಾ ವಿಮರ್ಶಕಿ ಗುರು ವಿದುಷಿ ಪ್ರತಿಭಾ ಎಂ.ಎಲ್. ಸಾಮಗ ಇವರಿಗೆ ‘ಗುರು ನಮನ’ ಮತ್ತು ಉಳ್ಳಾಲದ ನೃತ್ಯ ಸೌರಭ ನಾಟ್ಯಾಲಯ ಇದರ ನೃತ್ಯ ಗುರುಗಳಾದ ವಿದ್ವಾನ್ ಪ್ರಮೋದ್ ಉಳ್ಳಾಲ್ ಇವರಿಗೆ ‘ಗುರುಪ್ರೇರಣ’ ಗೌರವ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಇವರ ಹಿರಿಯ ಶಿಷ್ಯೆಯರಾದ ನಾಟ್ಯ ವಿದುಷಿಯರಾದ ಶ್ರೀಮತಿ ಸಂಜನಾ ಭರತ್, ಶ್ರೀಮತಿ ವೈಶ್ಮ ಶೆಟ್ಟಿ ಮತ್ತು ಕುಮಾರಿಯರಾದ ಕಾವ್ಯಶ್ರೀ, ದೀಪ್ತಿ ಐ., ಅಂಕಿತ ಬದಿಯಡ್ಕ ಮತ್ತು ಸಾಹಿತ್ಯ ಸುರೇಶ್ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಪ್ರಸ್ತುತಗೊಳ್ಳಲಿದೆ.