ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ಸಂಸ್ಥೆಯ ಅಮೃತ ವರ್ಷ 75 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ‘ಐಟಿಸಿ ಮಿನಿ ಸಂಗೀತ್ ಸಮ್ಮೇಳನ್’ ಸಮಾರಂಭವನ್ನು ದಿನಾಂಕ 19 ಅಕ್ಟೋಬರ್ 2025ರಂದು ಸಂಜೆ 3-30 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ಐಟಿಸಿ ಸಂಗೀತ್ ರಿಸರ್ಚ್ ಅಕಾಡೆಮಿ ಮತ್ತು ಸಪ್ತಕ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಪಂಡಿತ್ ಉಲ್ಹಾಸ್ ಕಶಾಲ್ಕರ್ ಇವರ ಹಾಡುಗಾರಿಕೆ, ಶ್ರೀ ಪರಮಾನಂದ ರಾಯ್ ಇವರ ಕೊಳಲು ವಾದನ, ಪಂಡಿತ್ ಸುರೇಶ್ ತಲ್ವಾಲ್ಕರ್ ಇವರ ತಬಲಾ, ಅಭಿಷೇಕ್ ಬೋರ್ಕರ್ ಇವರ ಸರೋದ್, ಶ್ರೀ ಗುರುಪ್ರಸಾದ್ ಹೆಗ್ಡೆ ಇವರ ಹಾರ್ಮೋನಿಯಂ ಮತ್ತು ಯಶವಂತ್ ವೈಷ್ಣವ್ ಇವರ ತಬಲಾ ವಾದನ ಪ್ರಸ್ತುತಗೊಳ್ಳಲಿದೆ.