ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಆಡಿಟೋರಿಯಂನಲ್ಲಿ ದಿನಾಂಕ 25-11-2023ರಂದು ಮೆಲ್ಬಾ ಇವೆಂಟ್ಸ್ ಬಹು ನಿರೀಕ್ಷಿತ ಸಂಗೀತ ಸುನಾಮಿಯ 5ನೇ ಆವೃತ್ತಿಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ವಹಿಸಿ “ಸಂಗೀತ ಹೂವಿನ ತೋಟವಿದ್ದಂತೆ ಈ ತೋಟದಿಂದ ಬರುವಂತಹ ಪ್ರತಿಭೆಗಳು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ” ಎಂದು ಹಾರೈಸಿದರು.
‘ಸಾಜನ್’ ಖ್ಯಾತಿಯ ಬಾಲಿವುಡ್ ನಿರ್ದೇಶಕ ಮತ್ತು ಛಾಯಾಗ್ರಾಹಕ ಲಾರೆನ್ಸ್ ಡಿಸೋಜಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅತಿಥಿಗಳೆಲ್ಲ ಸೇರಿ ಮೆಲ್ಬಾ ಇವೆಂಟ್ಸ್ ನ ಲೋಗೋವನ್ನು ಬಿಡುಗಡೆ ಮಾಡಿದರು. ಈ ಸಂಗೀತ ಸುನಾಮಿಯ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಸಂಗೀತಾಭಿಮಾನಿಗಳು ಭಾಗವಹಿಸಿದ್ದರು. ಉದಯೋನ್ಮಖ ಗಾಯಕಿ ರಿಶಲ್ ಕ್ರಾಸ್ತಾ ಮತ್ತು ರೋನಿ ಕ್ರಾಸ್ತಾ ನೇತೃತ್ವದಲ್ಲಿ ಪ್ರತಿಭಾವಂತ ಕಲಾವಿದರ ಬಳಗ 4 ಗಂಟೆಗಳ ಕಾರ್ಯಕ್ರಮದಲ್ಲಿ 26 ಆಕರ್ಷಕ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮೋಡಿಮಾಡಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ನ ನಿಕಟಪೂರ್ವ ಜಿಲ್ಲಾ ಗವರ್ನರ್ ಎಸ್. ಸಂಜಿತ್ ಶೆಟ್ಟಿ, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಅಲ್ವಿನ್ ಡೆ’ಸಾ, ಕೇಂದ್ರ ಉಪವಿಭಾಗದ ಎ.ಸಿ.ಪಿ. ಎಸ್.ಮಹೇಶ್ ಕುಮಾರ್, ಸಂಚಾರ ವಿಭಾಗದ ಎ.ಸಿ.ಪಿ. ಗೀತಾ ಕುಲಕರ್ಣಿ, ಆಮಂತ್ರಣ ಪರಿವಾರದ ವಿಜಯ್ ಕುಮಾರ್ ಜೈನ್, ಕಾಮಿಡಿ ಕಿಲಾಡಿ ಖ್ಯಾತಿಯ ಕವಿತಾ ಸುಧೀಂದ್ರ ಮತ್ತು ಆಲಿಸ್ ರೋಡ್ರಿಗಸ್ ಕುಲಶೇಕರ್ ಹಾಗೂ ಆಸ್ಟಿನ್ ಈ ಸುಮಧುರ ಸಂಜೆಯಲ್ಲಿ ಭಾಗವಹಿಸಿದ್ದರು. ಆರ್.ಜೆ. ಅಭಿಶೇಕ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.