ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 88ನೇ ವಾರ್ಷಿಕೋತ್ಸವ ಮತ್ತು ಸಂಗೀತ ವಿದ್ಯಾನಿಲಯ ಕದ್ರಿ ಇದರ 30ನೇ ವಾರ್ಷಿಕೋತ್ಸವದ ಹಾಗೂ ಶ್ರೀ ಶಾರದ ಮಹೋತ್ಸವ ಸಲುವಾಗಿ “ಕರ್ನಾಟಕ ಕಲಾತಿಲಕ” “ನಾಟ್ಯರಾಣಿ ಶಾಂತಲಾ” ಪ್ರಶಸ್ತಿ ಪುರಸ್ಕೃತ, ರಾಜ್ಯೋತ್ಸವ ಪ್ರಶಸ್ತಿ ವಿಜೇತ, ನಾಟ್ಯ ಭೀಷ್ಮ, ಪಿತಾಮಹ ಕೀರ್ತಿಶೇಷ ಯು.ಎಸ್, ಕೃಷ್ಣರಾವ್ ಇವರ 110ನೇ ವರ್ಷದ ಸಂಸ್ಮರಣೆಯಾಗಿ ಸಂಗೀತೋತ್ಸವ ಮತ್ತು ನೃತ್ಯೋತ್ಸವ 2023-24 ಕಾರ್ಯಕ್ರಮ ನಡೆಯಲಿರುವುದು.
ದಿನಾಂಕ 22-10-2023ನೇ ಆದಿತ್ಯವಾರ ಹಾಗೂ 23-10-2023ನೇ ಸೋಮವಾರ ಎರಡು ದಿನಗಳ ಕಾಲ ಕದ್ರಿಯ ನೃತ್ಯ ವಿದ್ಯಾನಿಲಯದ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದವಿನಂಗಡಿ, ಪಡೀಲ್ ಹಾಗೂ ಕುಂಜತ್ತಬೈಲ್ ಶಾಖೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ‘ನೃತ್ಯ ವೈವಿಧ್ಯ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವಿದ್ವಾನ್ ಶ್ರೀ ಯು.ಪಿ.ಶರಣ್ ಹಾಗೂ ವಿದುಷಿ ನಿಶ್ವಿತಾ ಶರಣ್ ಇವರ ನಿರ್ದೇಶನದಲ್ಲಿ ಈ ಕಾರ್ಯಕ್ರಮವು ಸಂಜೆ ಘಂಟೆ 5.00 ರಿಂದ 6.00ರ ವರೆಗೆ ನಡೆಯಲಿದೆ. ಬಳಿಕ ನೃತ್ಯ ವಿದ್ಯಾನಿಲಯದ ಸಂಗೀತ ಗುರುಗಳಾದ ವಿದುಷಿ ಉಷಾ ಪ್ರವೀಣ್ ಇವರ ಶಿಷ್ಯವೃಂದದವರಿಂದ ‘ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಪಕ್ಕವಾದ್ಯ ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರು, ಉಡುಪಿ ಹಾಗೂ ಮೃದಂಗದಲ್ಲಿ ಮಂಗಳೂರಿನ ಶ್ರೀ ಯು.ಪಿ ಶರಣ್ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮ ಸಂಜೆ ಘಂಟೆ 6.00 ರಿಂದ 8.00ರ ವರೆಗೆ ನಡೆಯಲಿದ್ದು, ಬಳಿಕ ನವರಾತ್ರಿ ಮಹಾಪೂಜೆ ನಡೆಯಲಿರುವುದು.
ದಿನಾಂಕ 23-10-2023 :
ಸಂಜೆ ಘಂಟೆ 5.00 ರಿಂದ 6.00ರ ವರೆಗೆ ದೂರದರ್ಶನ ಕಲಾವಿದರಾದ ಮಂಗಳೂರಿನ ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ ಇವರಿಂದ ‘ಭರತನಾಟ್ಯ’ ಕಾರ್ಯಕ್ರಮ ನಡೆಯಲಿದೆ. ಸಂಜೆ ಘಂಟೆ 6.00 ರಿಂದ 8.00ರ ವರೆಗೆ ನಾಟ್ಯ ವಿಶಾರದ ವಿದ್ವಾನ್ ಯು.ಕೆ. ಪ್ರವೀಣ್ ಇವರ ನಿರ್ದೇಶನದಲ್ಲಿ ಕದ್ರಿ ನೃತ್ಯ ವಿದ್ಯಾನಿಲಯದ ಶಿಷ್ಯವೃಂದದವರಿಂದ ‘ನೃತ್ಯ ಕಾರ್ಯಕ್ರಮ’ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪಕ್ಕವಾದ್ಯ ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ ಆಚಾರ್ ಪಾಡಿಗಾರ್ ಉಡುಪಿ ಹಾಗೂ ಮೃದಂಗದಲ್ಲಿ ಶ್ರೀ ರಾಕೇಶ್ ಸುರತ್ಕಲ್ ಸಹಕರಿಸಲಿದ್ದಾರೆ.
ಬಳಿಕ ನಡೆಯಲಿರುವ ಕಾರ್ಯಕ್ರಮದಲ್ಲಿ ಕದ್ರಿ ವಾರ್ಡಿನ ಕಾರ್ಪೋರೇಟರ್ ಶ್ರೀ ಮನೋಹರ್ ಶೆಟ್ಟಿ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಕಾರ್ಯಕ್ರಮ ಮುಂದುವರೆದು ರಾತ್ರಿಘಂಟೆ 8.00 ರಿಂದ ನವರಾತ್ರಿ ಮಹಾಪೂಜೆ ನಡೆಯಲಿರುವುದು.
ಈ ಕಾರ್ಯಕ್ರಮಕ್ಕೆ ನಾಟ್ಯ ವಿಶಾರದ ವಿದ್ವಾನ್ ಯು.ಕೆ. ಪ್ರವೀಣ್ ಮತ್ತು ವಿದುಷಿ ಉಷಾ ಪ್ರವೀಣ್ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಬಯಸಿದ್ದಾರೆ.