ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ಣಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ‘ಸಂಗೀತ ನೃತ್ಯೋತ್ಸವ’ ಕಾರ್ಯಕ್ರಮವನ್ನು ದಿನಾಂಕ 04 ಜುಲೈ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ.
ಮಾನ್ಯ ಸಚಿವರಾದ ಶಿವರಾಜ ಎಸ್. ತಂಗಡಗಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ‘ವಾರ್ಷಿಕ ಹೆಜ್ಜೆ – ಸಾಧನೆಯ ಗೆಜ್ಜೆ’ ಎಂಬ ಕೃತಿಯ ಅನಾವರಣ ಮಾಡಲಿದ್ದಾರೆ. ಕರ್ಣಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ ಇವರು ಅಧ್ಯಕ್ಷತೆ ವಹಿಸಲಿದ್ದು, ಡಾ. ಕೆ.ವಿ. ನಾಗರಾಜಮೂರ್ತಿ, ಡಾ. ಹಂಸಿನಿ ನಾಗೇಂದ್ರ, ವೈ.ಕೆ. ಮುದ್ದುಕೃಷ್ಣ ಮತ್ತು ಡಾ. ವಿದ್ಯಾರಾವ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5-00 ಗಂಟೆಗೆ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ‘ಶಾಸ್ತ್ರೀಯ ಕರ್ಣಾಟಕ ಸಂಗೀತ’, ಗಮಕ ಕಲಾ ಪರಿಷತ್ತು ವತಿಯಿಂದ ‘ಗಮಕ ವಾಚನ’ ಮತ್ತು ಜೈನ್ ವಿಶ್ವವಿದ್ಯಾಲಯ ವತಿಯಿಂದ ‘ನೃತ್ಯ’ ಪ್ರದರ್ಶನಗೊಳ್ಳಲಿದೆ.
ಸಭಾ ಕಾರ್ಯಕ್ರಮದ ಬಳಿಕ ಹಿರಿಯ ನೃತ್ಯ ಕಲಾವಿದರಾದ ದಾಸಪ್ಪ ಕೇಶವ ಇವರಿಂದ ನೃತ್ಯ ಪ್ರದರ್ಶನ, ಷಣ್ಮುಖಯ್ಯ ಕೆ. ಹಾರೋಗೇರಿ ಮತ್ತು ಶಿಷ್ಯಯರು ಹಾಗೂ ಗುಂಡಪ್ಪ ಎಸ್.ಕಲ್ ಹಿಪ್ಪರಗಿ ಮತ್ತು ಶಿಷ್ಯಯರು ಇವರಿಂದ ‘ಶಾಸ್ತ್ರೀಯ ಹಿಂದೂಸ್ತಾನಿ ಸಂಗೀತ’, ಅಖಿಲ ಕರ್ಣಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ವತಿಯಿಂದ ‘ಸುಗಮ ಸಂಗೀತ’ ಮತ್ತು ಎನ್.ಕೆ. ಮೋಹನ ಕುಮಾರ ಇವರಿಂದ ಕಥಾ ಕೀರ್ತನ ಪ್ರಸ್ತುತಗೊಳ್ಳಲಿದೆ.