ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಂಗೀತ ಸಂಭ್ರಮ ಹಾಗೂ ಶರಣ ನುಲಿಯ ಚಂದಯ್ಯ ಡಾ. ಬಿ.ಆರ್. ಅಂಬೇಡ್ಕರ್ ಬಸವ ಜಯಂತಿ ಸಂಗೀತೋತ್ಸವವು ದಿನಾಂಕ 14-04-2024ರಂದು ಮಧ್ಯಾಹ್ನ 3-00 ಗಂಟೆಗೆ ನಾದಬ್ರಹ್ಮ ಶಾರದ ಮಂದಿರದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರ್ತಿಶೇಷ ವಿದ್ವಾನ್ ಗಾಮದ ಶ್ರೀ ಕೆ. ಮಂಜಪ್ಪನವರ ಸ್ಮರಣಾರ್ಥ ಕರ್ನಾಟಕ ಸಂಗೀತ ಮೃದಂಗ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಹೆಚ್.ಎಲ್. ಗೋಪಾಲಕೃಷ್ಣ, ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಜಿ.ಆರ್. ರಾಮಕೃಷ್ಣಯ್ಯ, ಗಾಯನ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಚಿಂತಲಪಲ್ಲಿ ವಿ. ಶ್ರೀನಿವಾಸ ಮತ್ತು ವಿದ್ವಾನ್ ಶ್ರೀ ಬಿ.ಇ. ಕಮಲ ಕುಮಾರ, ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಮೈಸೂರು ಬಿ. ಸಂಜೀವ ಕುಮಾರ, ಮೃದಂಗ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಎಂ.ಜಿ. ನರೇಶ ಕುಮಾರ ಮತ್ತು ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಚಿಂತಾಮಣಿ ವಿ. ಗೋವರ್ಧನ ಇವರಿಗೆ ‘ಮಂಜುದಾಸ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಇದರ ಸದಸ್ಯರು ಸಂಗೀತ ಕಾರ್ಯಕ್ರಮ ನೀಡಲಿದ್ದು, ಪ್ರಶಸ್ತಿ ಪುರಸ್ಕೃತರು ಪಕ್ಕವಾದ್ಯದಲ್ಲಿ ಸಹಕರಿಸಲಿದ್ದಾರೆ.