Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಸಂಗ್ಯಾಬಾಳ್ಯಾ’ ನಾಟಕ ಪ್ರದರ್ಶನ | ಮಾರ್ಚ್ 2
    Drama

    ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಸಂಗ್ಯಾಬಾಳ್ಯಾ’ ನಾಟಕ ಪ್ರದರ್ಶನ | ಮಾರ್ಚ್ 2

    March 1, 2024Updated:March 2, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ರಂಗಚಂದಿರ ಟ್ರಸ್ಟ್ (ರಿ.) ಪ್ರಸ್ತುತ ಪಡಿಸುವ ಡಾ. ಚಂದ್ರಶೇಖರ ಕಂಬಾರ ರಚಿಸಿರುವ ‘ಸಂಗ್ಯಾಬಾಳ್ಯಾ’ ನಾಟಕ ಪ್ರದರ್ಶನವು ದಿನಾಂಕ 02-03-2024ರಂದು ಸಂಜೆ 6.30ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ.

    ಮೂಲ ಜೋತಪ್ಪ ಈ ನಾಟಕದ ನಿರ್ದೇಶನ ಮಾಡಿದ್ದು, ಎಸ್.ಟಿ. ಮಲ್ಲು (ತಿಮ್ಮಯ್ಯ), ಶೀಬಾ ಮತ್ತು ಆರ್.ಕೆ. ಪ್ರವೀಣ್ ಮೇಳದಲ್ಲಿದ್ದಾರೆ. ಸಿ.ಎಂ.ಟಿ. ಇವರು ಸಹನಿರ್ದೇಶನ ಮಾಡಿದ್ದು, ಜಿ. ಪಿ. ಒ. ಚಂದ್ರು ನಿರ್ವಹಣೆ ಮಾಡಿರುತ್ತಾರೆ. ಸಂಸ್ಕೃತಿ ಸಚಿವಾಲಯ ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ನಡೆಯಲಿದೆ.

    ನಿವೃತ್ತ ಮುಖ್ಯ ಇಂಜಿನಿಯರ್ ಹಾಗೂ ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಆರ್. ನರೇಂದ್ರ ಬಾಬು ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀಮತಿ ಎನ್. ನಮೃತ ಇವರು ನಾಟಕ ಪ್ರದರ್ಶನದ ಉದ್ಘಾಟನೆ ಮಾಡಲಿದ್ದಾರೆ.

    ‘ಸಂಗ್ಯಾಬಾಳ್ಯಾ’ ನಡೆದ ಘಟನೆಯನ್ನು ಬಯಲಾಟವಾಗಿಸಿದ ಜಾನಪದ ರೂಪಕ. ಹಾಡುಗಳ ಜನಪ್ರಿಯ ಧಾಟಿಗಳು ಹಾಗೂ ನಡೆದ ಘಟನೆಯ ಆಧಾರದ ಬಯಲಾಟ ಎಂಬುದರಿಂದಾಗಿ ಇದು ಮಿಂಚಿನ ವೇಗದಲ್ಲಿ ಜನಪ್ರಿಯವಾಯಿತು. ಬೆಳಗಾವಿ ಬಳಿಯ ಅಲತಗಿ ಎಂಬ ಹಳ್ಳಿಯಲ್ಲಿ ಇದರಲ್ಲಿ ಬರುವ ವೃತ್ತಿಪರ ‘ಗಂಗಾ’ನ ಪಾತ್ರಧಾರಿ ಸ್ತ್ರೀಯರು ಸಿಗುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಚಾರದಲ್ಲಿದ್ದ ಈ ಬಯಲಾಟ ಅಂದಿನ ಸರಕಾರದ ಅವಕೃಪೆಗೂ ಪಾತ್ರವಾಯಿತು. ಆದರೆ ಕದ್ದಾಡುವುದನ್ನು ನಿಲ್ಲಿಸಲಾಗಲಿಲ್ಲ. ಆಟ ಇನ್ನಷ್ಟು ಪ್ರಚಾರವಾಯಿತು.

    ಬಹುಶಃ ಆಟವನ್ನು ನಿಷೇಧಿಸಲು ಕೊಲೆಯೊಂದೇ ಕಾರಣವಾಗಿರಲಾರದು. ಸಂಗ್ಯಾನ ಪಾತ್ರಧಾರಿ ಆರಾಧನೆಯೆಂಬಂತೆ ಭಯಂಕರವಾಗಿ ಅಭಿನಯಿಸುವುದೇನೋ ಸರಿಯೆ, ಆದರೆ ಸಂಗ್ಯಾನನ್ನು ಕೊಂದ ಮೇಲೆ ಈರ್ಯಾನ ಪಾತ್ರಧಾರಿ ಸರಕಾರವನ್ನು ಟೀಕಿಸುವ ಸಂಭಾಷಣೆಯನ್ನು ಹೇಳುತ್ತಿದ್ದನಂತೆ. ಅದರಿಂದಾಗಿ ಈ ಬಯಲಾಟ ನಿಷೇಧಕ್ಕೊಳಗಾಯಿತೆಂದೂ ಹೇಳುವವರಿದ್ದರು. “ಸಂಗ್ಯಾ ಊರೊಳಗ ಕಾಳಗ ಆಗಿದ್ದ; ಕೊಂದಿವಿ. ಆದರ ಕೆಟ್ಟ ಇಂಗರೇಜಿ ಸರಕಾರಕ್ಕ ತಿಳಿಸಿ ಹೇಳೋದ ಹೆಂಗಾ?” ಎಂಬರ್ಥ ಬರುವ ಮಾತು ಅದು. ಈರ್ಯಾ ಅಂದನೋ ಬಿಟ್ಟನೋ, ಆಡುವವರು ಮಾತ್ರ ಈ ಮೂಲಕ ಬ್ರಿಟಿಷ್ ಸರಕಾರಕ್ಕೆ ಜನಪದರ ಪ್ರತಿಭಟನೆಯಾಗಿಯೇ ಆಡುತ್ತಿದ್ದರು. ಬರಬರುತ್ತ ಆಟದ ಕೊನೆ ಇಂಥ ಪ್ರತಿಭಟನೆಯಿಂದ ದೀರ್ಘವಾಗಿರುತ್ತಿತ್ತೆಂದೂ ಜನ ಹೇಳಿದರು. ಈ ಬಯಲಾಟವನ್ನು ನಿಷೇಧಿಸಿದ ಸರಕಾರೀ ಆಜ್ಞೆ ಸಿಕ್ಕುವುದೇ ಎಂದು ಪ್ರಯತ್ನಿಸಿದೆ; ಅದೂ ಸಿಕ್ಕಲಿಲ್ಲ.

    ಇದು ಮೂಲ ಶ್ರೀ ಪತ್ತಾರ ಕವಿ ಹಾಡುಗಳಲ್ಲಿ ರಚಿಸಿದ ‘ಸಂಗ್ಯಾಬಾಳ್ಯಾ’ ಬಯಲಾಟಕ್ಕೆ ಸಂಭಾಷಣೆ ಸೇರಿಸಿ ಆಧುನಿಕ ರಂಗಭೂಮಿಗೆ ಪರಿವರ್ತಿಸಿಕೊಂಡ ಅಳವಡಿಕೆ. ಹೀಗೆ ಮಾಡಲು ನನ್ನನ್ನು ಕೇಳಿಕೊಂಡವರು ಮತ್ತು ತಮ್ಮ ಪ್ರತಿಮಾ ರಂಗದಿಂದ ಪ್ರಯೋಗಿಸಲು ಅವಕಾಶ ಕಲ್ಪಿಸಿಕೊಟ್ಟವರು ಶ್ರೀ ಲಂಕೇಶ್ ಮತ್ತು ಮರಳಸಿದ್ದಪ್ಪ. ಇವರಿಬ್ಬರ ಒತ್ತಾಸೆ ಇಲ್ಲದಿದ್ದಲ್ಲಿ ಈ ಅಳವಡಿಕೆಯ ಕಲ್ಪನೆಯೇ ನನಗೆ ಬರುತ್ತಿರಲಿಲ್ಲ. ಅವರಿಗೂ ಹಾಗೂ ಇದನ್ನು ಪ್ರಕಾಶಪಡಿಸುತ್ತಿರುವ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರಿಗೂ ವಂದನೆಗಳು.

    ಚಂದ್ರಶೇಖರ ಕಂಬಾರ

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ‘ಮಾರ್ನಮಿ’ ನಾಟಕ ಪ್ರದರ್ಶನ | ಮಾರ್ಚ್ 5
    Next Article ಸುಮನಸಾ ಕೊಡವೂರು” ಸಂಸ್ಥೆಯ ರಂಗಹಬ್ಬದ 5ನೇ ದಿನದ ಕಾರ್ಯಕ್ರಮದಲ್ಲಿ ಶಾಸಕ ಯಶಪಾಲ್‌ ಸುವರ್ಣ
    roovari

    Add Comment Cancel Reply


    Related Posts

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026

    ಉಡುಪಿಯಲ್ಲಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’

    February 26, 2026

    ಬೆಳ್ತಂಗಡಿಯಲ್ಲಿ ‘ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ

    February 24, 2026

    ರಂಗ ವಿಮರ್ಶೆ | ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.