22 ಮಾರ್ಚ್ 2023, ಬೆಳ್ತಂಗಡಿ: ಉಜಿರೆಯ ಸಾನಿಧ್ಯ ಕೌಶಲ ತರಬೇತಿ ಕೇಂದ್ರ, ಶ್ರೀ ಗಣೇಶ ಸೇವಾ ಟ್ರಸ್ಟಿನ ಸೇವಾ ಘಟಕ ಮತ್ತು ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ಇದರ ಅಶ್ರಯದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 536ನೇ ಸಾಂಸ್ಕೃತಿಕ ಸೇವಾ ಯೋಜನೆಯಾಗಿ ಎಂಡೋಸಲ್ಫಾನ್ ಪೀಡಿತ ಹಾಗೂ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ‘ಸಾನಿಧ್ಯ ಉತ್ಸವ -2023′ ಮಾರ್ಚ್ 25ರಂದು ಬೆಳ್ತಂಗಡಿಯ ಮಾರಿಗುಡಿ ಮೈದಾನದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ.
ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಲಿರುವರು. ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್, ಜಿಲ್ಲಾ ಎಂಡೋಸಲ್ಫಾನ್ ಕಾರ್ಯಕ್ರಮ ವ್ಯವಸ್ಥಾಪಕ ಸಾಜುದ್ದೀನ್ ಹಾಗೂ ಮತ್ತಿರರರು ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಶೃಂಗೇರಿ ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾ ಸಂಘದಿಂದ ರಸಮಂಜರಿ ಕಾರ್ಯಕ್ರಮ, ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿಯವರ ನಿರ್ದೇಶನ ಮತ್ತು ಶಿಕ್ಷಕರ ನೆರವಿನಿಂದ ಎಂಡೋಸಲ್ಫಾನ್ ಪೀಡಿತ ಹಾಗೂ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಂದ “ಕಲ್ಲುರ್ಟಿ ಕಲ್ಕುಡ’ ಎಂಬ ದೈವಾರಾಧನೆ ಹಾಗೂ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ನಡೆಯಲಿದೆ. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಪ್ರಸಂಗ “ನಾಗಸ್ತ್ರ – ಕುಂಭಕರ್ಣ ಕಾಳಗ” ನಡೆಯಲಿದೆ.