ಬೆಂಗಳೂರು : ಶ್ರೀ ಗುರುರಾಜ್ ಗಂಟಿಹೊಳೆ ಹಿತೈಷಿಗಳು ಬೆಂಗಳೂರು ಇವರ ಆಯೋಜನೆಯಲ್ಲಿ ‘ಸಂಕಲ್ಪ’ ಕಾರ್ಯಕ್ರಮವನ್ನು ದಿನಾಂಕ 17 ಜುಲೈ 2025ರಂದು ಮಧ್ಯಾಹ್ನ 2-00 ಗಂಟೆಗೆ ಬೆಂಗಳೂರಿನ ವಿಜಯನಗರ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಇಲ್ಲಿರುವ ಬಂಟರ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೊಸಂಗಡಿ ಶ್ರೀ ಶಿವಶಕ್ತಿ ಭಜನಾ ಮಂಡಳಿ, ಮೋವಾಡಿ ತ್ರಾಸಿಯ ಶ್ರೀ ಮಾಣಿ ಸಿದ್ಧಲಿಂಗೇಶ್ವರ ಭಜನಾ ಮಂಡಳಿ ಮತ್ತು ಹೊಕ್ಕೋಳಿ ಮೋರ್ಟು ಶ್ರೀ ಪಂಜುರ್ಲಿ ಯುವ ಭಜನಾ ಮಂಡಳಿ ಇವರಿಂದ ಶ್ರೀರಾಮ ಕುಣಿತ ಭಜನೆ ಮತ್ತು ‘ಶ್ರೀ ದೇವಿ ಮಹಾತ್ಮೆ’ ಬಡಗುತಿಟ್ಟಿನ ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.