Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ಸ್ವರಕುಟೀರದಲ್ಲಿ ‘ಭಿನ್ನಧ್ವನಿ’ ಮಕ್ಕಳ ರಂಗಕೂಟ

    June 9, 2025

    ದಲಿತ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಡಾ. ಜಯದೇವಿ ಗಾಯಕವಾಡ ಆಯ್ಕೆ

    June 9, 2025

    ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-3’ ಕೊಂಕಣಿ ಕವಿಗೋಷ್ಟಿ

    June 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬಂಟ್ವಾಳ ತಾಲೂಕು ‘ಮಕ್ಕಳ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷೆಯಾಗಿ ಕುಮಾರಿ ಸಾನ್ವಿ ಸುವರ್ಣ ಆಯ್ಕೆ 
    Literature

    ಬಂಟ್ವಾಳ ತಾಲೂಕು ‘ಮಕ್ಕಳ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷೆಯಾಗಿ ಕುಮಾರಿ ಸಾನ್ವಿ ಸುವರ್ಣ ಆಯ್ಕೆ 

    November 1, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕವು ನಿರ್ವಹಿಸುವ ಬಂಟ್ವಾಳ ತಾಲೂಕು 17ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕಡೇಶಿವಾಲಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ದಿನಾಂಕ 06-12-2023ರಂದು ನಡೆಸಲಾಗುವುದು. ಈ ಸಮ್ಮೇಳನದಲ್ಲಿ ತಾಲೂಕಿನ 18 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಭಾಗವಹಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸಾನ್ವಿ ಸುವರ್ಣ ಆಯ್ಕೆಯಾಗಿರುತ್ತಾರೆ.

    ಸಾನ್ವಿ ಸುವರ್ಣ ಇವರು ಸುಂದರ ಪೂಜಾರಿ ಮತ್ತು ವಿಶಾಲಾಕ್ಷಿ ದಂಪತಿಗಳ ಸುಪುತ್ರಿ. ಕಲಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಬಾಲ ಪ್ರತಿಭೆ. ಎಳೆಯ ವಯಸ್ಸಿನಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ ಇವರು ಭಾರತ ಸರಕಾರದ ಶಿಕ್ಷಣ ಸಚಿವಾಲಯದಿಂದ “ವೀರಗಾಥಾ” ಪ್ರಮಾಣ ಪತ್ರ ಪಡೆದಿರುವರು. ಶಶಸ್ತ್ರ ಪಡೆಗಳ ಶೂರರ ಸ್ಮರಣಾರ್ಥವಾಗಿ ಈ ಪ್ರಮಾಣ ಪತ್ರ ನೀಡಲಾಗಿದೆ. ಭಾರತೀಯ ಜೀವ ವಿಮಾ ನಿಗಮವು ನೀಡುವ ಸಾಧನಾ ಪ್ರಶಸ್ತಿಯನ್ನು ಪಡೆದ ಈಕೆ ಉತ್ತಮ ಮಾತುಗಾರರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವುದರೊಂದಿಗೆ ಫೋಟೋಗ್ರಾಫಿ, ನೃತ್ಯ, ಬರವಣಿಗೆ, ಚಿತ್ರಕಲೆ ಇತ್ಯಾದಿಗಳನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಳುವಂಗಡ ಕಾವೇರಿ ಉದಯ ಇವರಿಗೆ ಗೌರವ ಡಾಕ್ಟರೇಟ್
    Next Article ಸುರತ್ಕಲ್ ನಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡಮಿಯ ‘ಉದಯರಾಗ – 46’ | ನವೆಂಬರ್ 5ರಂದು   
    roovari

    Add Comment Cancel Reply


    Related Posts

    ದಲಿತ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಡಾ. ಜಯದೇವಿ ಗಾಯಕವಾಡ ಆಯ್ಕೆ

    June 9, 2025

    ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-3’ ಕೊಂಕಣಿ ಕವಿಗೋಷ್ಟಿ

    June 9, 2025

    ನಾಡೋಜ ಡಾ. ಸಿದ್ಧಲಿಂಗಯ್ಯನವರ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ | ಜೂನ್ 11

    June 9, 2025

    ಕಯ್ಯಾರ ನೆನಪು 110ನೇ ಜನ್ಮದಿನಾಚರಣೆ ಕಾರ್ಯಕ್ರಮ

    June 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.